ಮೈಸೂರು: ನಗರದ ರಾಮಾನುಜ ರಸ್ತೆಯಲ್ಲಿರುವ ಜ್ಯೋತಿರ್ಗಮಯ ಉಚಿತ ವಿದ್ಯಾರ್ಥಿನಿಯರ ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಹೋಳಿಗೆ,ಡ್ರೈ ಫ್ರೂಟ್ಸ್,ಹಣ್ಣು, ನೋಟ್ ಬುಕ್ ಗಳನ್ನು ವಿತರಿಸಲಾಯಿತು.
ಈ ಮೂಲಕ ಸೇವಾ ಕಾರ್ಯದೊಂದಿಗೆ ಅಹಿಂಸೆಯೇ ಪರಮ ಧರ್ಮ ಎಂಬ ತತ್ವವನ್ನು ಪ್ರತಿಪಾದಿಸಿದ ಭಗವಾನ್ ಮಹಾವೀರ ಜಯಂತಿಯನ್ನು ಸ್ನೇಹ ಬಳಗದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಸಮಾಜ ಸೇವಕ ಡಾ. ರಘುರಾಮ್ ವಾಜಪೇಯಿ ಅವರು, ಸತ್ಯ,ಅಹಿಂಸೆ, ಆಸ್ಸ್ತ್ಯೀಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ ಮತ್ತು ಅಪರಿಗ್ರಹ (ಪರಿಗ್ರಹದ ತ್ಯಾಗ) ಎಂಬ 5 ಜೀವನದ ಮುಖ್ಯ ಸಾರವನ್ನು ಸಾರಿ ಅಹಿಂಸೆಯೇ ಪರಮೋಧರ್ಮ ಎಂಬ ತತ್ವವನ್ನು ಪ್ರತಿಪಾದಿಸಿದ ಭಗವಾನ್ ಮಹಾವೀರರ ಜಯಂತಿ ಆಚರಣೆಯನ್ನು ಸೇವಾ ಕಾರ್ಯದ ಮೂಲಕ ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ,ಇದು ಆತ್ಮ- ಅನುಭೂತಿ ಮತ್ತು ಮಾನವೀಯತೆಯ ಮಹತ್ವವನ್ನು ನೆನಪಿಸುತ್ತದೆ ಎಂದು ತಿಳಿಸಿದರು.
ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್ ಮಾತನಾಡಿ, ಭಗವಾನ್ ಮಹಾವೀರರ ಸಂದೇಶ ಸರ್ವಧರ್ಮಕ್ಕೂ ಅವಶ್ಯವಾಗಿದೆ.ಪ್ರೀತಿ,ಅಹಿಂಸೆಯಿಂದ ಜಗತ್ತನ್ನು ಗೆಲ್ಲಬಹುದು ಎಂದು ಮಹಾವೀರರು ಸಾರಿದ್ದರು ದೇಶದಲ್ಲಿ ಬಹಳಷ್ಟು ಜಾತಿ ಮತಗಳು ಇದ್ದರೂ ಎಲ್ಲಾ ಧರ್ಮಗಳು ಅಹಿಂಸೆಯನ್ನು ಸಾರುತ್ತವೆ ಎಂದು ಹೇಳಿದರು.
ಪ್ರತಿಯೊಬ್ಬರು ಅಹಿಂಸೆಗೆ ತಲೆಬಾಗಬೇಕು ಶಾಂತಿ ಮತ್ತು ಸಹಬಾಳ್ವೆಯಿಂದ ಜೀವನ ನಡೆಸುವುದು ಒಳಿತು.ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರೂ ವಿಶ್ವಶಾಂತಿ ಗಾಗಿ ಪ್ರಾರ್ಥಿಸುವಂತೆ ಪ್ರಕಾಶ್ ಪ್ರಿಯದರ್ಶನ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಂಚನಗೌಡ, ಬಿಜೆಪಿ ಮುಖಂಡ ಪುರುಷೋತ್ತಮ್, ಸಮಾಜ ಸೇವಕಿ ವಿದ್ಯಾ, ಎಂ ಎಂ ಗ್ರೂಪ್ಸ್ ಮಹಾನ್ ಶ್ರೇಯಸ್, ಹಿರಿಯ ಕ್ರೀಡಾಪಟು ಮಹದೇವ್,ರಾಜೇಶ್ ಕುಮಾರ್,ಮಹೇಶ, ಜ್ಯೋತಿರ್ಗಮಯ ನಿಲಯದ ಮಾದೇಶ್, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್ , ದತ್ತ, ಮತ್ತಿತರರು ಹಾಜರಿದ್ದರು.
