ಬೆಂಗಳೂರು: ಬೆಂಗಳೂರಿನ ಯವನಿಕದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರು ಹಾಗೂ ಜಾನಪದ ವಿದ್ವಾಂಸರಾದ ಡಾ ಮಂಜುಳಾ ಹುಲ್ಲಹಳ್ಳಿ ಅವರಿಗೆ ಸಾಂಸ್ಕೃತಿಕ ಗೌರವ ನೀಡಲಾಯಿತು.
ತಿಂಗಳ 31ರಂದು ಅವರು ಸೇವಾ ನಿವೃತ್ತಿ ಗೊಳ್ಳುತ್ತಿದ್ದು ,ಸುದೀರ್ಘ 30 ವರ್ಷಗಳ ಸೇವಾ ಅವಧಿಯಲ್ಲಿ ಯುವ ಚಟುವಟಿಕೆಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಹಳಷ್ಟು ಉತ್ತೇಜನ ನೀಡಿದ್ದಾರೆ.
ಅಲ್ಲದೆ ಯುವ ಜನರಿಗೆ ಪುಸ್ತಕ ಪರಂಪರೆಯನ್ನು ಪರಿಚಯ ಮಾಡಿಸಿಕೊಟ್ಟಂತ ಹೆಗ್ಗಳಿಕೆಯು ಅವರದು.
ಅವರ ಸೇವಾ ನಿವೃತ್ತಿ ಅಂಗವಾಗಿ ಮಂಜುಳಾ ಅವರನ್ನು ಕನ್ನಡ ಜಾನಪದ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರು ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯರೂ ಆದ ಡಾ ಜಾನಪದ ಎಸ್ ಬಾಲಾಜಿ ಅವರು ಅಭಿನಂದಿಸಿ ಗೌರವಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕರು ಡಾ ಜಿತೇಂದ್ರ ಶೆಟ್ಟಿ, ಕೇಂದ್ರ ಕಚೇರಿಯ ಸಹಾಯಕ ನಿರ್ದೇಶಕರು ಮಂಜುನಾಥ ಸ್ವಾಮಿ, ಚಾಮರಾಜನಗರ ಜಿಲ್ಲಾ ಸಹಾಯಕ ನಿರ್ದೇಶಕರು ಸುರೇಶ, ಯಾದಗಿರಿ ಜಿಲ್ಲಾ ಸಹಾಯಕ ನಿರ್ದೇಶಕರು ರಾಜು ಬಾವಿಹಳ್ಳಿ, ಉಡುಪಿ ಜಿಲ್ಲಾ ಸಾಯಕ ನಿರ್ದೇಶಕರು ಡಾ ರೋಶನ್ ಕುಮಾರ್ ಶೆಟ್ಟಿ, ದಾವಣಗೆರೆ ಜಿಲ್ಲಾ ಸಹಾಯಕ ನಿರ್ದೇಶಕರು ಶ್ರೀಮತಿ ಸುಚೇತ ನವಲಗಿ,ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ ಸಿ ಕಾಂತಪ್ಪ ಅವರುಗಳು ಈ ವೇಳೆ ಉಪಸ್ಥಿತರಿದ್ದರು.
