
ಮೈಸೂರು: ಮೈಸೂರಿನ ಸಿದ್ದಾರ್ಥ ನಗರದ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಇಂದಿನಿಂದ ಏಪ್ರಿಲ್ 4 ರ ವರೆಗೆ ಶ್ರೀರಾಮನವಮಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ.
ಇಂದು ದೇವಾಲಯದ ಅರ್ಚಕರಾದ ಅರುಣ್ ಅವರು ಸೀತಾ,ರಾಮ,ಲಕ್ಷ್ಮಣ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ನೆರವೇರಿಸಿ ಪುಷ್ಪಾಲಂಕಾರ ಮಾಡಿದರು.
ನಂತರ ಮಹಾಮಂಗಳಾರತಿ ಮಾಡಿ ಭಕ್ತರಿಗೆ ಪಾನಕ,ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.
ಸಂಜೆ ಮಹಿಳೆಯರು ರಾಮ ಕೀರ್ತನೆಗಳನ್ನು ಹಾಡಿದರು.ನಂತರ ಭರತನಟ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
