ಮೈಸೂರು: ಶ್ರೀ ರಾಮನ ಜೀವನದ ಪ್ರತಿಯೊಂದು ಕ್ಷಣವೂ ನಿಯಮ, ಶಿಸ್ತು ಮತ್ತು ಧರ್ಮದ ಅನುಸರಣೆ ಎಂಬ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.
ಮೈಸೂರು ಯುವ ಬಳಗದ ವತಿಯಿಂದ ದೇವರಾಜ ಅರಸು ರಸ್ತೆಯಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಹರೀಶ್ ಗೌಡರು ರಾಮನಿಗೆ ವಿಶೇಷ ಪೂಜೆ ನೆರವೇರಿಸಿ ನಂತರ ಭಕ್ತಾದಿಗಳಿಗೆ ಪಾನಕ ಮತ್ತು ಮಜ್ಜಿಗೆ ವಿತರಿಸಿ ಮಾತನಾಡಿದರು.
ರಾಮ ನಾಮ ಸ್ಮರಣೆ ಮಾಡುವುದರಿಂದ ನಮ್ಮ ಜೀವನ ಪಾವನವಾಗುತ್ತದೆ, ಪುರುಷೋತ್ತಮ ಶ್ರೀ ರಾಮ ನಮಗೆಲ್ಲ ಆದರ್ಶ ಪುರುಷನಾಗಿದ್ದಾನೆ ಎಂದು ಹೇಳಿದರು.
ಸಂದರ್ಭದಲ್ಲಿ ಕನಕ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ರವಿ ಚಂದ್ರ, ಮೈಸೂರು ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷರಾದ ಗುರುರಾಜ್, ರಾಮರಾಜ್, ಸಂದೀಪ್, ನವೀನ್,ಸಂತೋಷ್, ಪ್ರಮೋದ್, ನಿತಿನ್, ಶ್ರೀನಿವಾಸ್, ಎಸ್ ಎನ್ ರಾಜೇಶ್, ಮಂಜುನಾಥ್, ಹರೀಶ್ ಗೌಡ, ಹೇಮಂತ್, ಹರ್ಷ,ಮತ್ತಿತರ ಭಕ್ತರು ಉಪಸ್ಥಿತರಿದ್ದರು.
