ಬೆಂಗಳೂರು: ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ನಿರ್ಮಾಣದಿಂದ ಮೈಸೂರಿನಿಂದ 1 ಗಂಟೆ 30 ನಿಮಿಷದಲ್ಲಿ ಬೆಂಗಳೂರಿನ ಕೆಂಗೇರಿ ವರೆಗೆ ತಲುಪಬಹುದು, ಆದರೆ ಕೆಂಗೇರಿಯಿಂದ ಬೆಂಗಳೂರು ನಗರಕ್ಕೆ ತಲುಪಲು ಮತ್ತೆ 1 ಗಂಟೆ 30 ನಿಮಿಷ ಬೇಕು, ಇದರಿಂದ ಜನರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಪ್ರತಿನಿತ್ಯ ಸಂಚರಿಸುವ ಸಾರ್ವಜನಿಕರಿಗೆ ಟ್ರಾಫಿಕ್ ನಿಂದ ಬಹಳ ತೊಂದರೆಯಾಗುತ್ತಿದೆ, ಈಗಾಗಲೇ ಬೆಂಗಳೂರು ಟೌನ್ ಹಾಲ್ ನಿಂದ ಚಾಮರಾಜಪೇಟೆ ವರೆಗೆ ಬಿ. ಜಿ. ಎಸ್ ಮೇಲ್ಸೇತುವೆ ಇದ್ದು, ಆ ಮೇಲ್ಸೇತುವೆ ಯನ್ನು ಕೆಂಗೇರಿ ವರೆಗೆ ವಿಸ್ತರಣೆ ಮಾಡಿದರೆ, ಟ್ರಾಫಿಕ್ ಕಡಿಮೆಯಾಗಿ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ ಹಾಗಾಗಿ ತುರ್ತಾಗಿ ಮೇಲ್ಸೇತುವೆ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಶಾಸಕ ಜಿ ಟಿ ದೇವೇಗೌಡರು ಬಜೆಟ್ ಮೇಲಿನ ಚರ್ಚೆ ವೇಳೆ ಸರ್ಕಾರಕ್ಕೆ ಮನವಿ ಮಾಡಿದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಚರ್ಚೆಗೆ ಉತ್ತರಿಸುವಾಗ ಆದಷ್ಟು ಬೇಗ ಕ್ಯಾಬಿನೆಟ್ ನಲ್ಲಿ ಈ ವಿಷಯ ತಂದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
