ಕನ್ನಡ ಚಲನಚಿತ್ರ ರಂಗದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅವರು ಮಲಯಾಳಂ ಚಿತ್ರರಂಗಕ್ಕೆ ಹೋಗ್ತಾರೆ ಎಂಬ ಸುದ್ದಿ ಚಿತ್ರನಗರಿಯಲ್ಲಿ ದಟ್ಟವಾಗಿ ಹರಿದಾಡುತ್ತಿದೆ.
ಸದ್ಯ ಅವರು ಶ್ರೇಯಸ್ ತಲ್ಪಾಡೆ, ಬಾಬಿ ಸಿಂಹ, ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್ ನಟನೆಯ ಎಂ ಶಶಿಧರ್ ನಿರ್ದೇಶನದ ‘ಅಜಾಗ್ರತ’ ಚಿತ್ರದಲ್ಲಿ ಬಿಸಿಯಾಗಿದ್ದಾರೆ.
2024 ರಲ್ಲಿ ಬಿಡುಗಡೆಯಾದ ‘ಭೈರಾದೇವಿ’ ಚಿತ್ರದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಸ್ವೀಟಿ,ಈಗ ಮತ್ತೆ ರಂಗಕ್ಕೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ.
ರಾಧಿಕಾ ಅವರು ಹಿಂದೆ ತಮಿಳು ಮತ್ತು ತೆಲುಗು ಸಿನಿಮಾ ಸೇರಿದಂತೆ ದಕ್ಷಿಣ ಭಾರತದ ವಿವಿಧ ಚಿತ್ರರಂಗಗಳಲ್ಲಿ ಕೆಲಸ ಮಾಡಿದ್ದಾರೆ. ಸ್ವೀಟಿ,ಕುಟ್ಟಿ ರಾಧಿಕಾ ಎಂಬೆಲ್ಲಾ ಹೆಸರಿನಲ್ಲಿ ಕರೆಯಲಾಗುತ್ತೆ.
ಅವರು ಕನ್ನಡ ಸಿನಿಮಾವನ್ನು ಮೀರಿದ ಅವಕಾಶಗಳನ್ನು ಅನ್ವೇಷಿಸುತ್ತಿದ್ದು ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಾರೆ ಎನ್ನಲಾಗ್ತಾ ಇದೆ.
ಮಲೆಯಾಳಂ ನ ಪ್ರಮುಖ ನಿರ್ಮಾಣ ಸಂಸ್ಥೆಯೊಂದು ತಮ್ಮನ್ನು ಸಂಪರ್ಕಿಸಿದೆ ಎಂದು ರಾಧಿಕಾ ತಿಳಿಸಿದ್ದಾರೆ.
ನಿಜ ‘ನನಗೆ ಮಲಯಾಳಂ ಪ್ರಾಜೆಕ್ಟ್ಗೆ ಆಫರ್ ಬಂದಿದೆ, ಕಥೆ ತುಂಬಾ ಇಷ್ಟವಾಯಿತು. ಎಲ್ಲಾ ಸರಿ ಬಂದರೆ ನಾನು ಯೋಜನೆಯನ್ನು ದೃಢೀಕರಿಸುತ್ತೇನೆ’ ಎಂದು ಹೇಳುತ್ತಾರೆ.
ಅಜಾಗ್ರತ’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಸುತ್ತಿದ್ದಾರೆ. ಈ ಚಿತ್ರವು ಸದ್ಯ ಬಹು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
‘ಆಸಕ್ತಿದಾಯಕ ಸ್ಕ್ರಿಪ್ಟ್ಗಳನ್ನು ಕೇಳಲು ನನಗೆ ಸಂತೋಷವಾಗಿದೆ. ಕುಟುಂಬದ ಬದ್ಧತೆಗಳಿಂದಾಗಿ ಬ್ಯುಸಿಯಾಗಿಬಿಟ್ಟಿದ್ದೆ,ಈ ವರ್ಷ ಎರಡು ಯೋಜನೆಗಳನ್ನಾದರೂ ಕೈಗೆತ್ತಿಕೊಳ್ಳಬೇಕೆಂದಿದ್ದೇನೆ ಎಂದು ಸ್ವೀಟಿ ಹೇಳಿಕೊಂಡಿದ್ದಾರೆ.
