ಇಸ್ಲಾಮಾಬಾದ್: ಪಾಕಿಸ್ತಾನದ ಮುರಿಯ್ಕೆಯ ಮರ್ಕಜ್ ತೈಬಾದಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ.
ಗುಂಡು ಹಾರಿಸಿದ್ದಲ್ಲದೆ ಹರಿತವಾದ ಆಯುಧದಿಂದ ಇರಿದಿದ್ದಾರೆ.ಈದ್ ಪ್ರಾರ್ಥನೆಯ ಕೆಲವೇ ಕ್ಷಣಗಳ ನಂತರ ಈ ದಾಳಿ ನಡೆದಿದೆ. ಬಿಲಾಲ್ ಆರಿಫ್ ಸಲಾಫಿ ಲಷ್ಕರ್-ಎ-ತೊಯ್ಬಾದ ಕಮಾಂಡರ್.
ಪಾಕಿಸ್ತಾನದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿದ ಕೊಲೆ ಪ್ರಕರಣ ದೇಶದ ಭದ್ರತಾ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದೆ.
ಲಾಹೋರ್ನಲ್ಲಿ ನಡೆದ ಭಯೋತ್ಪಾದಕ ಬಿಲಾಯಿ ಆರಿಫ್ ಸಲಾಫಿ ಹತ್ಯೆ “ಧುರಂಧರ್ ಶೈಲಿ” ದಾಳಿಯಾಗಿ ಗುರುತಿಸಲ್ಪಟ್ಟಿದ್ದು, ಇದು ಸಾಮಾನ್ಯ ಘಟನೆ ಅಲ್ಲ ಎಂದು ಅಲ್ಲಿನ ಮಾಧ್ಯಮ ಹೇಳುತ್ತಿದೆ.
ಪಾಕಿಸ್ತಾನದ ನೆಲದಲ್ಲಿ ಆಶ್ರಯ ಪಡೆದಿರುವ ಭಾರತದ ಶತ್ರುಗಳಿಗೆ ಈಗ ಕಾಲ ಕೂಡಿ ಬಂದಂತಿದೆ. ಅನಾಮಧೇಯ ಬಂದೂಕುಧಾರಿಗಳ ಗುಂಡಿಗೆ ಮತ್ತೊಬ್ಬ ಕುಖ್ಯಾತ ಉಗ್ರ ಬಿಲಾಲ್ ಬಲಿಯಾಗುತ್ತಿದ್ದಂತೆ ಇಡೀ ಪಾಕಿಸ್ತಾನ ಬೆಚ್ಚಿಬಿದ್ದಿದೆ.
ಈ ನಿಗೂಢ ಹತ್ಯೆಗಳ ಸರಣಿ ಎಷ್ಟು ಭೀತಿ ಹುಟ್ಟಿಸಿದೆ ಎಂದರೆ, ಲೈವ್ ಸುದ್ದಿಯಲ್ಲೇ ಪಾಕಿಸ್ತಾನಿ ನಿರೂಪಕಿ ನಡುಗುತ್ತಾ, ಪಾಕಿಸ್ತಾನದಲ್ಲಿ ಭಾರತದ ವೈರಿಗಳನ್ನು ಒಬ್ಬೊಬ್ಬರಾಗಿ ಮುಗಿಸುತ್ತಿರುವುದು ಯಾರು ಎಂದು ಪ್ರಶ್ನಿಸುವಂತಾಗಿದೆ ಎಂದು ಹೇಳಿದ್ದಾರೆ.
ಗಡಿಯಾಚೆ ಕುಳಿತು ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದವರಿಗೆ ಈಗ ಅವರದ್ದೇ ನೆಲದಲ್ಲಿ ಮೃತ್ಯು ಭೀತಿ ಶುರುವಾಗಿದ್ದು, ಈ ಹತ್ಯೆಗಳ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.
