ಬೀರೂರು: ಬೀರೂರಿನ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿ ವತಿಯಿಂದ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇದೇ ವೇಳೆ ಭಾವಸಾರ ಜನಾಂಗದ ಕುಲದೇವತೆ ಇಂಗುಲಾಂಬಿಕ ದೇವಿ ಜಯಂತಿಯನ್ನೂ ಆಚರಿಸಲಾಯಿತು.
ದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಿಸಲಾಯಿತು.
ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿಯ ಸದಸ್ಯರಿಗೆ ಭಜನೆ ಹಾಗೂ ಸ್ತೋತ್ರಗಳನ್ನು ಹೇಳಿಕೊಟ್ಟ ಮೈತ್ರಿ ಅವರನ್ನು ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಹಿಳಾ ದಿನಾಚರಣೆ ಪ್ರಯುಕ್ತ ಮಂಡಳಿಯ ಸದಸ್ಯರಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಮಂಡಳಿಯ ಅಧ್ಯಕ್ಷೆ ಸುಷ್ಮಾ ನಾಗರಾಜ್, ಕಾರ್ಯದರ್ಶಿ ಗೀತಾ ಖಂಡೋಜಿ ರಾವ್, ನಿರ್ದೇಶಕರಾದ ಇಂದುಮತಿ, ಪುಷ್ಪಾ ತುಕಾರಾಂ ಅವರು ಮಹಿಳೆಯರ ಕುರಿತು ಮಾತನಾಡಿದರು. ಗೀತಾ ಖಂಡೋಜಿ ರಾವ್ ಕಾರ್ಯಕ್ರಮ ನಿರೂಪಿಸಿದರು.

