ಬೆಂಗಳೂರು: ರಾಷ್ಟ್ರೀಯ ಸೇವ ಯೋಜನೆ ಶಿಸ್ತು, ಬದ್ಧತೆ, ಪ್ರಾಮಾಣಿಕತೆ, ರಾಷ್ಟ್ರ ನಿರ್ಮಾಣದ ಚಟುವಟಿಕೆಗಳ ಜೊತೆಗೆ ಜೀವನ ಶೈಲಿ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರೂ, ಭಾರತ ಸರ್ಕಾರದ ಐಸಿಸಿಆರ್ ಸದಸ್ಯರಾದ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ಎಸ್ ಭವನದಲ್ಲಿ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ 2025-26 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇದರ ಸಾಮಾಜಿಕ ಚಟುವಟಿಕೆಗಳು ಯುವ ಸಬಲೀಕರಣಕ್ಕೆ ಒತ್ತು ನೀಡುವುದಲ್ಲದೆ ನಿಸ್ವಾರ್ಥ ಸೇವ ಮನೋಭಾವವನ್ನು ಮೂಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಗೆ ವಿಶೇಷ ಇತಿಹಾಸ ಇದೆ ಎಂದು ಜಾನಪದ ಎಸ್ ಬಾಲಾಜಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಹರೀಶ್ ಎಂ ಅವರು ಮಾತನಾಡಿ,
2000 ಕಿಂತ ಹೆಚ್ಚಿನ ವಿದ್ಯಾರ್ಥಿಗಳಿರುವ ಪಾಲಿಟೆಕ್ನಿಕ್ ನಲ್ಲಿ ನೂರು ಜನಕ್ಕೆ ಅವಕಾಶ ಸಿಕ್ಕಿರುವುದು ಒಂದು ಭಾಗ್ಯ, ಇದನ್ನು ಸದುಪಯೋಗಪಡಿಸಿಕೊಂಡು ಸ್ವಯಂಸೇವಕರು ಇತರರಿಗೆ ಮಾದರಿಯಾಗ ಬೇಕೆಂದು ಸಲಹೆ ನೀಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಎನ್ಎಸ್ ಎಸ್ ಸಂಯೋಜನಾಧಿಕಾರಿ ಡಾ ರಮೇಶ್ ಕಿತ್ತೂರ್ ಮಾತನಾಡಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ, ವಿಶೇಷವಾಗಿ ಸ್ವಯಂ ಸೇವಕರಿಗೆ ತರಬೇತಿ ನೀಡುವುದರ ಜೊತೆಗೆ ರಾಷ್ಟ್ರ ನಿರ್ಮಾಣದ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.
ಎನ್ಎಸ್ಎಸ್ ಅಧಿಕಾರಿ ಎಸ್.ಎಂ ಮಧುಸೂಧನ ಪ್ರಸ್ತಾವಿಕವಾಗಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ರೂಪರೇಷೆಗಳು ಹಾಗೂ ಮೌಲ್ಯಗಳು ಮಹತ್ವವನ್ನು ತಿಳಿಸಿದರು.
ಎಸ್ ಜೆ ಪಾಲಿಟೆಕ್ನಿಕ್ ಸಹಾಯಕ ಆಡಳಿತ ಅಧಿಕಾರಿ ಸಂಜಯ್ ಬಿ ವರ್ಕೆಡಿ, ಕನ್ನಡ ಜಾನಪದ ಪರಿಷತ್ ರಾಜ ಕಾರ್ಯದರ್ಶಿ ಪ್ರೊ ಕೆ ಎಸ್ ಕೌಜಲಗಿ,ಎನ್ಎಸ್ಎಸ್ ಅಧಿಕಾರಿ ಚಂದನ ವಾಗ್ಲೆ, ಉಪನ್ಯಾಸಕರಾದ ಜಗದೀಶಯ್ಯ, ಮುರುಳಿ, ಡಾ. ಚಂದ್ರ ಮೌಳಿ ಟಿ ವಿ, ನಾಗೇಂದ್ರ ಎಂ.ಎಸ್, ಸತೀಶ್ ಎ.ಎಂ, ದೀಪಾ ಕೆ, ರಜಿತ, ಸೌಮ್ಯ ಸಿ.ಜೆ, ಬೇಬಿ ಎಂ.ಜಿ ಹಾಗೂ ಸ್ವಯಂಸೇವಕ,ಸೇವಕಿಯರು ಉಪಸ್ಥಿತರಿದ್ದರು.
