ಮೈಸೂರು: ಕೈವಾರ ತಾತಯ್ಯನವರು 18ನೇ ಶತಮಾನಕ್ಕೆ ಸೇರಿದವರು ಸಮಾಜಕ್ಕೆ ಇವರ ಸಂದೇಶಗಳು, ಸಮ ಸಮಾಜ ನಿರ್ಮಾಣ ಮಾಡಲು ಕೈಗೊಂಡಿದ್ದ ಕೆಲಸ ಕಾರ್ಯಗಳು ಸದಾ ಮಾದರಿ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.
ಮಹಾನ್ ವ್ಯಕ್ತಿಗಳನ್ನು ಸ್ಮರಿಸುವುದರೊಂದಿಗೆ ಪ್ರತಿಯೊಬ್ಬರು ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಭಾನುವಾರ ಕಿರುರಂಗಮoದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯಲ್ಲಿ ಭಾಗವಹಿಸಿ ಶಾಸಕರು ಮಾತನಾಡಿದರು.
ಇಂದಿನ ದಿನಗಳಲ್ಲಿ ಜಾತಿ ಬೇದಭಾವವಿಲ್ಲದೆ ಅತಿ ಹೆಚ್ಚು ಮಕ್ಕಳು ಅರ್ಚಕರ ವೃತ್ತಿ, ಶಾಸ್ತ್ರೀಯ ಸಂಗೀತ, ಭರತನಾಟ್ಯದಂತಹ ಕಲೆಯ ಕಡೆ ಅತಿ ಹೆಚ್ಚು ಒಲವು ತೋರುತ್ತಿದ್ದಾರೆ, ಇದಕ್ಕೆ ಪ್ರೋತ್ಸಾಹ ನೀಡುತ್ತಿರುವ ಪ್ರತಿಯೊಬ್ಬ ತಂದೆ ತಾಯಂದಿರಿಗೂ ಅಭಿನಂದನೆಗಳು ಎಂದು ತಿಳಿಸಿದರು.
ಮಹಾನ್ ವ್ಯಕ್ತಿಗಳ ಕಾರ್ಯಕ್ರಮಕ್ಕೆ ಎಲ್ಲರನ್ನು ಕರೆತರಬೇಕು ಮತ್ತು ಇವರುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಆಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡುಲು ಸಾಧ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡರು ಮಾತನಾಡಿ,
ಜೀವನದಲ್ಲಿ ಶಿಕ್ಷಣಕ್ಕಿಂತ ದೊಡ್ಡದು ಯಾವುದು ಇಲ್ಲ,ಮೊದಲು ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು.
ಜ್ಞಾನ ಗ್ರಹಿಸುವುದರೊಂದಿಗೆ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಮಹಾನ್ ವ್ಯಕ್ತಿಗಳ ಜಯಂತಿಗಳಿಗೆ ಮಕ್ಕಳನ್ನು ಕರೆತರಬೇಕು ಎಂದು ಅವರು ಸಲಹೆ ನೀಡಿದರು.
ಕೈವಾರ ತಾತಯ್ಯ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿ. ಕೈವಾರ ತಾತಯ್ಯ ಅವರ ಆದರ್ಶದ ಹಾದಿಯಲ್ಲಿ ನಾವು ನಡೆಯಬೇಕು ತಾತ್ತಯ್ಯ ನವರ ಬದುಕು ಆದರ್ಶಗಳು ನಮ್ಮ ಜೀವನಕ್ಕೆ ಸ್ಫೂರ್ತಿಯಾಗಬೇಕು ಎಂದು ಹೇಳಿದರು.
ಸಾಂಸ್ಕೃತಿಕ ಕಲಿಕೆ ಮಕ್ಕಳಿಗೆ ಬಹಳ ಮುಖ್ಯವಾದದ್ದು ಜನರಿಗೆ ಸಂಸ್ಕೃತಿಯ ಬಗ್ಗೆ ಅತಿ ಹೆಚ್ಚಿನ ಜ್ಞಾನವನ್ನು ತಿಳಿದುಕೊಳ್ಳಬೇಕೆಂದು ಹೇಳಿದರು ಸಮಾಜದಲ್ಲಿ ಹಣ ಮತ್ತು ರಕ್ತ ಯಾವಾಗಲೂ ವಿನಿಮಯವಾಗಬೇಕು ನಾವು ಮಾಡುವ ಕೆಲಸ ಸಮಾಜದ ಶಾಶ್ವತವಾಗಿರಬೇಕೆಂದು ಹೇಳಿದರು.
ಉಪನ್ಯಾಸಕರಾದ ಪ್ರೊ ಹೆಚ್.ಎಸ್ ನರಸಿಂಹಯ್ಯ ನವರು ಮಾತನಾಡಿ ಕೈವಾರ ತಾತಯ್ಯನವರು 18ನೇ ಶತಮಾನದವರು. ಇವರು ಬಲಿಜ ಜನಾಂಗಕ್ಕೆ ಸೇರಿದವರು ಇವರ ಮೂಲ ಹೆಸರು ನಾರಾಯಣ, ವಿಜಯನಗರ ಸಾಮ್ರಾಜ್ಯದಲ್ಲಿ ವಾಸವಿದ್ದರೂ ವಿಜಯನಗರ ಸಾಮ್ರಾಜ್ಯ ಪತನದ ನಂತರ ಅಲ್ಲಿಂದ ವಲಸೆ ಹೊರಟರು ಮುಂದೆ ಅವರು ತಮ್ಮ ಜೀವನದಲ್ಲಿ ಬಳೆ ಮಾರುವ ವೃತ್ತಿಯಿಂದ ಜೀವನ ನಡೆಸುತ್ತಿದ್ದರು. ಬಲಿಜ ಸಮುದಾಯದವರು ಅತಿ ಹೆಚ್ಚು ಶಿಕ್ಷಣ ಪಡೆಯಬೇಕು ಎಂದು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಸುದರ್ಶನ್ ಅಂಕಣಕಾರ ಗುಬ್ಬಿ ಗೂಡು ರಮೇಶ್, ಗಣ್ಯರಾದ ವೆಂಕಟೇಶ್, ಮೀನಾ ತೂಗುದೀಪ, ಶ್ರೀನಾಥ್ ಬಾಬು, ವಿಜಯ ಸಂಪತ್ ಕುಮಾರ್, ಕೆ ಸಿ ಪ್ರಕಾಶ್ ಗೋಪಾಲಕೃಷ್ಣ, ಆರ್ ಎನ್ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
