ಮೈಸೂರು: ಭೂಗಳ್ಳರು ಮೈಸೂರಿನ ಕೆ ಆರ್ ಮಿಲ್ ಕಾಲೋನಿ, ಕೆಸರೆ ಸರ್ವೆ ನಂಬರ್ 580 ರ ಶ್ರೀ ರಾಮಚಂದ್ರ ಉದ್ಯಾನವನವನ್ನು ನಕಲಿ ದಾಖಲೆ ಸೃಷ್ಟಿಸಿ ಲೇ ಔಟ್ ಮಾಡಿ ನಿವೇಶನ ಮಾರಾಟ ಮಾಡಲು ಹೊರಟಿದ್ದು, ಜನಾಕ್ರೋಶ ವ್ಯಕ್ತವಾಗಿದೆ.
ಜನರ ಆರೋಗ್ಯ ಭಾಗ್ಯಕ್ಕಾಗಿ ಉದ್ಯಾನವನಗಳನ್ನು ಮಾಡಲಾಗುತ್ತದೆ.ಆದರೆ ಖಾಸಗಿ ಧನದಾಹಿ ವ್ಯಕ್ತಿಗಳು ಶ್ರೀ ರಾಮಚಂದ್ರ ಉದ್ಯಾನವನವನ್ನು ನುಂಗಿ ಲೇಔಟ್ ಮಾಡಿ ನಿವೇಶನಗಳನ್ನು ಮಾಡಿದ್ದಾರೆ.
ಸುಮಾರು ಒಂದು ಎಕರೆಗೂ ಹೆಚ್ಚು ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಲೇಔಟ್ ಮಾಡಿದ್ದಾರೆ.
ಈಗಾಗಲೇ ಉದ್ಯಾನವನದ ಪಕ್ಕದಲ್ಲಿ ಹಾದು ಹೋಗಿರುವ ನಾಲೆಯನ್ನೂ ಗುಳುಂ ಮಾಡಿ ಕಾಂಪೌಂಡ್ ನಿರ್ಮಿಸಿದ್ದಾರೆ
ಎಂದು ಕೆ ಆರ್ ಮಿಲ್ ಕಾಲೋನಿ ಮಾಜಿ ನೌಕಾರರ ಕ್ಷೆಮಾಭಿವೃದ್ದಿ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಜಾಗ ಅಳತೆ ಮಾಡಲು ಬಂದ ಅಧಿಕಾರಿಗಳ ಜೊತೆ ಸದಸ್ಯರು ಚರ್ಚಿಸಿದರು ಈ ವೇಳೆ ಮಾತಿನ ಚಕಮಕಿ ಕೂಡಾ ನಡೆಯಿತು.
ಹೀಗೆ ಒಂದು ಪ್ರಮುಖ ಉದ್ಯಾನವನ ಮತ್ತು ನಾಲೆ ಒತ್ತುವರಿಯಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನವನ್ನೇ ಹರಿಸದಿರುವುದು ದುರ್ದೈವದ ಸಂಗತಿ.
ಮೈಸೂರಿನಲ್ಲಿ ಹೀಗೆ ಒಂದೊಂದಾಗಿ ಜಾಗಗಳು,ಕೆರೆಗಳು,ಕಾಲುವೆಗಳನ್ನು ಗುಳುಂ ಮಾಡುತ್ತಾ ಹೋದರೆ ಇದೂ ಕೂಡಾ ಬೆಂಗಳೂರಿನಂತೆ ಆಗಿಬಿಡುತ್ತದೆ.
ಇಂತಹ ಅನಧಿಕೃತ ಲೇಔಟ್ ಗಳಲ್ಲಿ ನಿವೇಶನ ಪಡೆದು ಮುಂದೆ ಮೋಸ ಹೋಗುವ ಬದಲು ಜನರು ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಕೆ ಆರ್ ಮಿಲ್ ಕಾಲೋನಿ ಮಾಜಿ ನೌಕಾರರ ಕ್ಷೆಮಾಭಿವೃದ್ದಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು,ಸ್ಥಳೀಯ ಗ್ರಾಮಪಂಚಾಯಿತಿ ಯವರು,
ಜನಪ್ರತಿನಿಧಗಳು ಇತ್ತ ಗಮನ ಹರಿಸಿ ಶ್ರೀ ರಾಮಚಂದ್ರ ಉದ್ಯಾನವನವನ್ನು ಉಳಿಸಬೇಕು, ಲೇಔಟ್ ನಿರ್ಮಾಣ ಮಾಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಮಿತಿಯ ಪದಾಧಿಕಾರಿಗಳು ಕೆ ಆರ್ ಮಿಲ್ ಕಾಲೋನಿ ಜನರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ತಡೆಯಲು ಮುಂದಾಗದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ, ಲೇಔಟ್ ನಿರ್ಮಾಣ ಆಗಕೂಡದು ಶ್ರೀ ರಾಮಚಂದ್ರ ಉದ್ಯಾನವನದ ಜಾಗವನ್ನು ವಾಪಸು ಪಡೆಯಬೇಕು ಎಂದು ಕೆ ಆರ್ ಮಿಲ್ ಕಾಲೋನಿ ಮಾಜಿ ನೌಕಾರರ ಕ್ಷೆಮಾಭಿವೃದ್ದಿ ಸಮಿತಿಯ ಅಧ್ಯಕ್ಷರು ಭೀಮರಾಜ್, ಉಪಾಧ್ಯಕ್ಷರು ಕೆಂಪಯ್ಯ,ಪ್ರದಾನ ಕಾರ್ಯದರ್ಶಿ ದಾನಪಾಲ್ ಕೆ., ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಸಹಕಾರ್ಯದರ್ಶಿ, ಪುರುಷೋತ್ತಮ್, ಖಜಾಂಚಿ ರಾಜ್ ಶೇಖರ್,ಆನಂದ್ ಗೌಡ ಮತ್ತು ಗ್ರಾಮಸ್ಥರು ಮುಖಂಡರುಗಳು ಜಿಲ್ಲಾಧಿಕಾರಿ ಗಳನ್ನು ಒತ್ತಾಯಿಸಿದ್ದಾರೆ.
