ಮೈಸೂರು: ಮೈಸೂರಿನ ಚಾಮುಂಡಿಪುರಂನಲ್ಲಿರುವ ವನವಾಸಿ ಕಲ್ಯಾಣ ಪ್ರಾಂತ ಕಾರ್ಯಾಲಯದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕೆಲವು ಪತ್ರಿಕಾ ಜಾಹೀರಾತುಗಳಾಗಿರಬಹುದು
ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸುತ್ತಿರುವ ಜಾಹೀರಾತುಗಳಾಗಿರಬಹುದು ಅದರ ಸಂಬಂಧಿತವಾಗಿ ಮೈಸೂರು ಮಹಿಳಾ ಜಾಗರಣ ಸಮಾವೇಶ ಏರ್ಪಡಿಸಲಾಗಿತ್ತು.
ಇದೇ ವೇಳೆ ಪ್ರಬುದ್ಧ ಮಹಿಳಾ ಘೋಷ್ಠಿ ಹಮ್ಮಿಕೊಳ್ಳಲಾಯಿತು.
ಘೋಷ್ಠಿಯನ್ನು ಕೆಎಸ್ಒಯು ಪ್ರಾಧ್ಯಾಪಕರಾದ ಡಾ ಜ್ಯೋತಿ ಶಂಕರ್ ಉದ್ಘಾಟಿಸಿದರು.
ಪ್ರಮುಖವಾಗಿ ಜಾಹೀರಾತುಗಳಲ್ಲಿ ಮಹಿಳೆಯರ ಪಾತ್ರ ಹಾಗೂ ಅವರ ಅಸ್ಮಿತೆ ಹಾಗೂ ಘನತೆ ಅದರಿಂದ ಸಮಾಜದಲ್ಲಿ ಆಗುತ್ತಿರುವ ಪರಿಣಾಮಗಳು ಎಂಬ ವಿಚಾರವಾಗಿ ಘೋಷ್ಠಿ ನಡೆಸಲಾಯಿತು.
ನಿವೃತ್ತ ಆರ್ ಬಿ ಐ ಅಧಿಕಾರಿ ಡಾಕ್ಟರ್ ಬಾಲು ಕೆಂಚಪ್ಪ, ಬಾಗಲಕೋಟೆಯ ನಂದಿಮಠ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಚಂದ್ರಿಕಾ ಕುರoದ್ವಾಡ, ಮೈಸೂರು ನಗರ ಉಪಾಧ್ಯಕ್ಷರಾದ ವಿಕ್ರಂ ಅಯ್ಯಂಗಾರ್, ಕಾರ್ಯದರ್ಶಿ ಶ್ರೀಕಂಠೇಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಕಮಲಮ್ಮ, ಗಾಯತ್ರಿ ನಾಡಿಗ್, ಎಬಿಜಿಪಿ ಕಾನೂನು ಸಲಹೆಗಾರರಾದ ಪುಷ್ಪ ಮತ್ತಿತರರು ಭಾಗವಹಿಸಿದ್ದರು.
