ಮೈಸೂರು: ಚಂದ್ರ ಗ್ರಹಣ ಪ್ರಯುಕ್ತ ಮೈಸೂರಿನ ಸಿ ಎಫ್ ಟಿ ಆರ್ ಐ ಪಕ್ಕದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಶ್ರೀ ಸತ್ಯಪ್ರೋಮೋದ ಕಲ್ಯಾಣಮಂಟಪದಲ್ಲಿ ನವಗ್ರಹ ಹೋಮ ಹಾಗೂ ಗ್ರಹಣ ಶಾಂತಿ ನೆರವೇರಿಸಲಾಯಿತು.
ಪಂಡಿತ್ ಬಾಗೇವಾಡಿ ಆಚಾರ್ಯ ಹಾಗೂ ಶ್ರೀ ಪಾಂಡು ಅವರ ನೇತೃತ್ವದಲ್ಲಿ ನೋರಾರು ಜನರ ಸಮ್ಮುಖದಲ್ಲಿ ಈ ದಾರ್ಮಿಕ ಕಾರ್ಯಗಳು ನಡೆಯಿತು.
ಪ್ರದಾನ ಅರ್ಚಕರಾದ ಶ್ರೀ ಗುರು, ನಾಗಭೂಷಣ್ ಆಚಾರ್ಯ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯರಾದ S.B. ವಾಸುದೇವ ಮೂರ್ತಿ, ಶ್ರೀ ಭುಜಂಗ, ಗುರಾಜ್ ಕೊಳ್ಳಿ, ಮ್ಯಾನೇಜರ್ ಶ್ರೀ ಪ್ರಮೋದ್ ಆಚಾರ್ಯ ಮತ್ತಿತರರು ಹಾಜರಿದ್ದರು.
