ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು, ವಿಧ್ಯಾರ್ಥಿಗಳಿಗೆ ಪೆನ್ ಹಾಗೂ ರೋಸ್ ಕೊಟ್ಟು ಕರ್ನಾಟಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಗುಡ್ ಲಕ್ ಹೇಳಿದರು.
ರಮಾ ವಿಲಾಸ ರಸ್ತೆಯಲ್ಲಿರುವ ಮರಿಮಲ್ಲಪ್ಪ ಕಾಲೇಜಿನ ಸೆಂಟರ್ ಹಾಗೂ ನಾರಾಯಣ ಶಾಸ್ತ್ರಿ ರಸ್ತೆಯ ಮಹಾರಾಣಿ ಸರ್ಕಾರಿ ಪ್ರೌಢಶಾಲಾ ಕೇಂದ್ರದಲ್ಲಿ ಪರೀಕ್ಷೆ
ಎದುರಿಸುತ್ತಿರುವ ವಿಧ್ಯಾರ್ಥಿಗಳಿಗೆ ಗುಡ್ ಲಕ್ ಹೇಳಿ,ಮೈಸೂರಿಗೆ ಉನ್ನತ ಫಲಿತಾಂಶ ಬರಲೆಂದು ಹಾರೈಸಿದರು.
ನಿಮ್ಮೊಂದಿಗೆ ನಾವಿದ್ದೇವೆ ಎಂದು ವಿಧ್ಯಾರ್ಥಿಗಳಿಗೆ ಅಭಯ ನೀಡಿದರಲ್ಲದೆ ಪೆನ್ ಹಾಗೂ ಗುಲಾಬಿ ಹೂ ನೀಡಿ ಶುಭ ಕೋರಿದರು.
ಈ ವೇಳೆ ಕರ್ನಾಟಕ ಹಿತರಕ್ಷಣಾ ವೇದಿಕೆ ವಿನಯ್ ಕುಮಾರ್ ಮಾತನಾಡಿ,
ಪರೀಕ್ಷೆಯನ್ನು ಖುಷಿಯಿಂದ ಬರೆಯಿರಿ,
ಪರೀಕ್ಷೆಯನ್ನು ಸಂಭ್ರಮದಿಂದ ಬರೆದರೆ ನಿರೀಕ್ಷೆಗಿಂತಲೂ ಹೆಚ್ಚಿನ ಅಂಕಗಳನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪರೀಕ್ಷೆ ಶತ್ರು ಎಂದು ಪರಿಗಣಿಸಿದರೆ ವರ್ಷವಿಡೀ ಕಲಿತ ಪಾಠಗಳೆಲ್ಲ ಮರೆತು ಹೋಗುತ್ತವೆ, ಯಾವುದೇ ಕಾರಣಕ್ಕೂ ಪರೀಕ್ಷೆ ಭೂತ ಎಂದುಕೊಳ್ಳಬೇಡಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಿ ಎಂಬ ಆತ್ಮಸ್ಥೈರ್ಯವನ್ನು ಪೋಷಕರು ತುಂಬಬೇಕು ಎಂದು ತಿಳಿಸಿದರು.
ಸಂಕುಚಿತ ಮನೋಭಾವದಿಂದ ಸುಮ್ಮನೆ ಕುಳಿತರೆ ಆತ್ಮವಂಚನೆ
ಮಾಡಿಕೊಂಡಂತಾಗುತ್ತದೆ ದೊಡ್ಡ ದೊಡ್ಡ ಸಂಶೋಧನೆಗಳು ಹುಟ್ಟಿಕೊಂಡಿದ್ದೇ ಪ್ರಶ್ನೆಗಳಿಂದ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ,ಪರೀಕ್ಷೆ ಒಂದು ಸಂಭ್ರಮ ಎನ್ನುವುದರ ಜೊತೆಗೆ ಆಂತರಿಕವಾಗಿ ನೀವು ಮೊದಲು ಪ್ರಶ್ನೆ ಮಾಡಿಕೊಳ್ಳಿ ,ಪರೀಕ್ಷೆ ಎಂಬ ಭಯ, ಒತ್ತಡದಿಂದ ಮೊದಲು ಹೊರ ಬನ್ನಿ, ಎಂತಹ ಕಠಿಣ ಸಂದರ್ಭದಲ್ಲಿಯೂ ನೀವು ಕೀಳರಿಮೆ ಇಟ್ಟುಕೊಳ್ಳಬಾರದು, ಪೋಷಕರು ಕೂಡ ಮಕ್ಕಳ ಮೇಲೆ ನಂಬಿಕೆ ಇಡಬೇಕು ಒತ್ತಡ ಹೇರಬಾರದು ಎಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್,ವಿಕ್ರಂ ಅಯ್ಯಂಗಾರ್ ,ಎಸ್ ಎನ್ ರಾಜೇಶ್,ಗುರುರಾಜ್ ಶೆಟ್ಟಿ, ನೀತು,ಉಮೇಶ್ ಮತ್ತಿತರರು ಹಾಜರಿದ್ದರು.
