ಮೈಸೂರು: ಜಾತ್ಯತೀತ ಜನತಾದಳದ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜನರೊಂದಿಗೆ ಜನತಾದಳದ ಕಾರ್ಯಕ್ರಮಕ್ಕೆ ಮೈಸೂರಿಗೆ ಆಗಮಿಸಿದ ವೇಳೆ ಹುಣಸೂರು ಶಾಸಕ ಹರೀಶ್ ಗೌಡರು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಾತ್ಯತೀತ ಜನತಾದಳದ ನೂತನ ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ಸ್ಪೂರ್ತಿ ಡೆವಲಪರ್ಸ್ ಮಾಲೀಕ ಎಮ್ ಪಿ ಮಧು,ಕನ್ವಿತಾ ಡೆವಲಪರ್ಸ್ ಮಾಲಿಕ ಎಮ್ ಸಿದ್ದರಾಜು ಹಾಗೂ ಜೆಡಿಎಸ್ ಯುವ ಮುಖಂಡರಾದ ಗಗನ್ ಮತ್ತಿತರರು ಹಾಜರಿದ್ದರು.
