ಆಸ್ಟ್ರೇಲಿಯಾ: ಬಾಂಬ್ ಬೆದರಿಕೆ ಕರೆ ಬಂದ ಕಾರಣ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಅಧಿಕೃತ ನಿವಾಸ ಕ್ಯಾನ್ಬೆರಾದಿಂದ ಬೇರೆಡೆಗೆ ಸ್ಥಳಾಂತರಿಸಲಾಯಿತು.
ಆಂಥೋನಿ ಅಲ್ಬನೀಸ್ ಅವರ ಅಧಿಕೃತ ನಿವಾಸದಲ್ಲಿ ಶೋಧ ಕಾರ್ಯ ಪೂರ್ಣಗೊಂಡ ನಂತರ ಅವರು ಮತ್ತೆ ತಮ್ಮ ನಿವಾಸಕ್ಕೆ ಹಿಂತಿರುಗಿದ್ದಾರೆ.
ಪ್ರಧಾನಿ ಅವರ ಮನೆಯಲ್ಲಿ ಸಂಪೂರ್ಣ ಶೋಧ ನಡೆಸಲಾಯಿತು. ಅನುಮಾನಾಸ್ಪದವಾದ ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಳಗ್ಗೆ ಅಲ್ಬನೀಸ್ ತಮ್ಮ ನಿವಾಸದಲ್ಲಿ ಪತ್ರಕರ್ತರೊಬ್ಬರೊಂದಿಗೆ ಇಟ್ಟುಕೊಂಡಿದ್ದ ಸಂದರ್ಶನ ಮುಗಿದ ಕೆಲವೇ ಗಂಟೆಗಳಲ್ಲಿ ಬಾಂಬ್ ಬೆದರಿಕೆ ಬಂದಿತ್ತು.
ಬಾಂಬ್ ಬೆದರಿಕೆ ಕರೆ ಇದೇ ಮೊದಲೇ ನಲ್ಲಾ ಪ್ರಧಾನಿ ಮತ್ತು ಹಲವಾರು ಫೆಡರಲ್ ಸಂಸದರು ಭದ್ರತಾ ಬೆದರಿಕೆಗಳನ್ನು ಎದುರಿಸಿದ್ದಾರೆ.
