ಮೈಸೂರು: ಮೈಸೂರಿನ ಜಲದರ್ಶಿನಿ ಯಲ್ಲಿ ನಡೆದ ಕಾಯಕ ಸಮಾಜದ ಕಾರ್ಯಕಾರಣಿ ಸಭೆ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ ಸಿ ಪುಟ್ಟ ಸಿದ್ದಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕುಂಬಾರ ಸಮಾಜದ ಸಂತಕವಿ ಸರ್ವಜ್ಞರ ಜಯಂತಿ ಆಚರಿಸಲಾಯಿತು.
ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಸಿ ಪುಟ್ಟ ಸಿದ್ದಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜನಾಂಗದ ಮೈಸೂರು ಜಿಲ್ಲಾ ಸಂಘಟನಾ ಕುಂಬಾರ ಸಂಘ ಅಧ್ಯಕ್ಷರಾದ ಮುಳ್ಳೂರು ಮಹೇಶ್, ಯಶವಂತ, ಕೊಣಸೂರು ಶಿವರಾಜ್, ನಾಡಪ್ಪನಹಳ್ಳಿ ನಾಗರಾಜ ಶೆಟ್ಟಿ, ಮಾಕೋಡ್ ಬಸವರಾಜ್, ಕೆ ಆರ್ ನಗರದ ತಿಮ್ಮಶಟ್ಟಿ ಮಡಿವಾಳ ಸಮಾಜದ ಕೆಂಪಶೆಟ್ಟಿ, ಸಮಾಜದ ರಮೇಶ್, ಯಾದವ ಸಮಾಜದ ಮಾದೇವ್ ಯಾದವ್, ಕೆ ಆರ್ ನಗರ ಪತ್ರಕರ್ತ ಸಂಘದ ಅಧ್ಯಕ್ಷರಾದ ಸುರೇಶ್, ಟಿ ನರಸೀಪುರ ತಾಲೂಕಿನ ಲೋಕೇಶ್ ಆಚಾರ್ ಸೇರಿದಂತೆ ಹಲವಾರು ಮಂದಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
