ಮೈಸೂರು: ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದರಿ ಅವರೇ ತಮಗೆ ಮಾಹಿತಿಯ ಕೊರತೆ ತುಂಬಾ ಇದೆ, ವಿಚಾರ ಸರಿಯಾಗಿ ತಿಳಿಯದೆ ಬಸವಣ್ಣನವರ ಹೆಸರು ತೆಗೆಯುವುದು ಸರಿಯಲ್ಲ ಎಂದು ವೀರಶೈವ ಲಿಂಗಾಯತ ಮುಖಂಡರಾದ ಮಾಲಿನಿ ಆರ್ ತಿಳಿಸಿದ್ದಾರೆ.
ಶೂದ್ರರು, ಶೂದ್ರರು ಎಂದು ನೀವೇ ಅವರನ್ನು ಕೆಳಮಟ್ಟದ ಜಾತಿ ಎಂದು ಬಿಂಬಿಸುತ್ತಿದ್ದೀರಿ ಬಸವಣ್ಣನವರ ತತ್ವಗಳನ್ನು ಯಾರು ಪಾಲಿಸುತ್ತಿದ್ದಾರೆ ಎಂಬ ಅರಿವು ತಮಗೆ ಇಲ್ಲದಿದ್ದರೆ ತಾವು ರಾಜೀನಾಮೆ ಕೊಟ್ಟು ಮನೆಯಲ್ಲಿ ಇರುವುದು ಸೂಕ್ತ ಎಂದು ಪ್ರಕಟಣೆಯಲ್ಲಿ ಅವರು ಟೀಕಿಸಿದ್ದಾರೆ.
ಬಸವಣ್ಣನವರ ಅನುಭವ ಮಂಟಪ ಈಗ ಪೀರ್ ಬಂಗಲೆ ಆಗಿದೆ, ದಯಮಾಡಿ ಅದನ್ನು ಉಳಿಸಿಕೊಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಜೊತೆ ಕೈ ಜೋಡಿಸಿ ನಂತರ ಬಸವಣ್ಣನವರ ಬಗ್ಗೆ ಚರ್ಚೆಗೆ ಬನ್ನಿ ಎಂದು ಮಾಲಿನಿ ಆಹ್ವಾನಿಸಿದ್ದಾರೆ.
ಬಸವಣ್ಣನವರ ತತ್ವಗಳು, ಅಹಿಂಸಾ ಮಾರ್ಗವನ್ನು ಎಷ್ಟು ಜನ ಪಾಲಿಸುತ್ತಿದ್ದಾರೆ ಎಂಬ ಅರಿವು ತಮಗೆ ಇದ್ದರೆ ಇತರ ವೀರಶೈವ ಲಿಂಗಾಯತರ ಬಗ್ಗೆ ಕೀಳಾಗಿ ಮಾತನಾಡುತ್ತಿರಲಿಲ್ಲ.
ಹೌದು ನಮ್ಮದು ಕೊಟ್ಟು ಕೊಡುವ ಕೈಗಳೇ ಹೊರತು ಬೇಡಿಕೊಳ್ಳುವುದಲ್ಲಾ, ಶೂದ್ರ ಶೂದ್ರರು ಎಂದು ಹೇಳುತ್ತಿರುವ ನೀವು ಎಲ್ಲಾ ಲಿಂಗಾಯತ ಶೂದ್ರರಿಗೆ,ಮೀಸಲಾತಿಯನ್ನು ಎಲ್ಲರಿಗೂ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು
ಮಾಲಿನಿ ಆರ್ ಕುಟುಕಿದ್ದಾರೆ.
