ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಜೀಬ್ರಾ ‘ಪ್ರಾಚಿ’ ಅನಾರೋಗ್ಯದಿಂದ ಮೃತಪಟ್ಟಿದೆ.
ಪ್ರಾಚಿಗೆ 10 ವರ್ಷ ವಯಸ್ಸಾಗಿತ್ತು.ಇದನ್ನು 2018ರ ಸೆ.4ರಂದು ಇಸ್ರೇಲ್ನ ರಾಮತ್ ಗ್ಯಾನ್ ಮೃಗಾಲಯದಿಂದ ಪಡೆಯಲಾಗಿತ್ತು.
ಪ್ರಾಚಿ ಮೃಗಾಲಯಕ್ಕೆ ತಂದ ನಂತರ ಐದು ಮರಿಗಳಿಗೆ ಜನ್ಮ ನೀಡಿತ್ತು. ಮೃಗಾಲಯಕ್ಕೆ ಬರುವ ಪ್ರವಾಸಿಗರು ಹಾಗೂ ಸಂದರ್ಶಕರನ್ನು ಆಕರ್ಷಿಸುತ್ತಿತ್ತು.
ಈ ಬಾರಿ ಗರ್ಭ ಧರಿಸಿದ್ದಾಗ ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಅದು ಬಳಲುತ್ತಿತ್ತು.
ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ, ಹೆಣ್ಣು ಮರಿಗೆ ಜನ್ಮ ನೀಡಿದ ಎರಡು ದಿನಗಳ ನಂತರ ಪ್ರಾಚಿ ಮೃತಪಟ್ಟಿದೆ.
ಮರಿಯನ್ನು ಸಿಬ್ಬಂದಿ ಆರೈಕೆ ಮಾಡುತ್ತಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ.
