ಹುಣಸೂರು: ಹುಣಸೂರಿನ ರತ್ನಪುರಿ ದರ್ಗಾದಲ್ಲಿ ಪುರಾಣ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅದ್ದೂರಿ ಉತ್ಸವ ನಡೆಯಿತು.
ಇಡೀ ರತ್ನಪುರಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ.
ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವವನ್ನು ಯಾವುದೇ ಜಾತಿ ಧರ್ಮದ ಭೇದವಿಲ್ಲದೆ ರತ್ನಪುರಿ ಮತ್ತು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಮುಖಂಡರು ಸೇರಿ ಅದ್ದೂರಿಯಾಗಿ ನೆರವೇರಿಸಿದರು.
ಒಂದು ಸಣ್ಣ ಅಹಿತಕರ ಘಟನೆ ನಡೆಯದೆ ಎಲ್ಲರೂ ಸಹೋದರರಂತೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವದ ಅಂಗವಾಗಿ
ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ರಾಜ್ಯಾಧ್ಯಕ್ಷ ಶಿವಣ್ಣ ಮತ್ತು ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ 15 ಉತ್ತಮ ರಾಸುಗಳ ಜೋಡಿಗೆ ಪಕ್ಷದ ವತಿಯಿಂದ ಬಹುಮಾನ ವಿತರಿಸಲಾಯಿತು.
ಶನಿವಾರ ಸಂಜೆ ಆಂಜನೇಯ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಜಾತ್ರೆಯು ಜಾತ್ರಾ ಉತ್ಸವದ ಅಧ್ಯಕ್ಷರಾದ ಪ್ರಭು, ಪ್ರಸನ್ನ,ಪುಟ್ಟ ಸ್ವಾಮಿ, ಅಜ್ಗರ್ ರವಿ,ಹರಿಹರನ್ ಸ್ವಾಮಿ ಅಲ್ಲದೆ ಹುಣಸೂರಿನ ಹಾಲಿ, ಮಾಜಿ ಶಾಸಕರು ಮತ್ತು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಸೇರಿದಂತೆ ಅನೇಕ ಮುಖಂಡರ ಮುಂದಾಳತ್ವದಲ್ಲಿ ನೆರವೇರಿತು.
ಹುಣಸೂರು ತಹಸಿಲ್ದಾರ್ ಮತ್ತು ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು.
