ಮೈಸೂರು: ಸೆಂಟ್ರಲ್ ಆರ್ಮಡ್ ಪೊಲೀಸ್ ಫೋರ್ಸ್ (ಎಸ್ ಎಸ್ ಸಿ )ಗೆ ಆಯ್ಕೆ ಆಗಿ, ರಾಷ್ಟ್ರ ಸೇವೆಗೆ ಆಯ್ಕೆ ಆಗಿರುವವರನ್ನು ಸೈನಿಕ್ ಅಕಾಡೆಮಿಲ್ಲಿ ಅಭಿನಂದಿಸಲಾಯಿತು.
ಮೈಸೂರಿನ ಬೆಳವಾಡಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿರುವ ಸೈನಿಕ್ ಅಕಾಡೆಮಿಯಲ್ಲಿ ವಿವಿಧ ಜಿಲ್ಲೆಗಳಿಂದ ಬಂದು ತರಬೇತಿ ಪಡೆದು 18 ಅಭ್ಯರ್ಥಿಗಳು ಸೆಂಟ್ರಲ್ ಆರ್ಮಡ್ ಪೊಲೀಸ್ ಫೋರ್ಸ್ (ಎಸ್ ಎಸ್ ಸಿ )ಗೆ ಆಯ್ಕೆ ಆಗಿದ್ದು, ರಾಷ್ಟ್ರ ಸೇವೆಗೆ ಆಯ್ಕೆ ಆಗಿರುವವರಿಗೆ ಸೈನಿಕ್ ಅಕಾಡೆಮಿಲ್ಲಿ ಅಭಿನಂದನಾ ಗೌರವ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ, ಅತಿಥಿಗಳಾಗಿ ಸಬ್ ಇನ್ಸ್ಪೆಕ್ಟರ್ ಜಯಾಕೀರ್ತಿ (ವಿಜಯನಗರ ಪೊಲೀಸ್ ಠಾಣೆ), ಪೂಜಾ ಹೆಚ್ ಎಸ್ (ಅಂತಾರಾಷ್ಟ್ರೀಯ ಮಟ್ಟದ ಕಬ್ಬಡಿಯ ಆಟದ ಭಾರತೀಯ ಮೊದಯ ಮಹಿಳಾ ರೆಫ್ರಿ, ಕರ್ನಾಟಕದಲ್ಲಿ 5 ವರ್ಷದ ತನಕ ಕಬ್ಬಡಿ ಕ್ಯಾಪ್ಟನ್), ಗಿರೀಶ್ (ಲಯನ್ಸ್ ಜೀವದಾರ ಬ್ಲಡ್ ಸೆಂಟರ್) ಉಪಸ್ಥಿತರಿದ್ದು ದೇಶ ಸೇವೆಗೆ ಹೊರಟಿರುವ ಮಕ್ಕಳಿಗೆ ಆಶೀರ್ವದಿಸಿದರು.
ಮಾಜಿ ಕಾಮಾಂಡೋ ಮತ್ತು ಸೈನಿಕ್ ಅಕಾಡೆಮಿ ಸಂಸ್ಥಾಪಕರು ಶ್ರೀಧರ ಸಿ ಎಂ, ಸಹ ಸಂಸ್ಥಾಪಕಿ ಅನಿತಾ ಎನ್ ಎಂ, ಅಧ್ಯಾಪಕರು ಸಂತೋಷ, ವಿಜಯ್, ಸ್ವಾಮಿ ಗೌಡ, ಸಾಕ್ಷಿ ಮತ್ತು ಸಹ ಸಿಬ್ಬಂದಿಗಳು, ಪೋಷಕರು, ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.
ಈ ವೇಳೆ ಮಾಜಿ ಕಮಾಂಡೋ ಶ್ರೀಧರ್ ಅವರು ಮಾತನಾಡಿ ನಮ್ಮ ದಕ್ಷಿಣ ಕರ್ನಾಟಕದಲ್ಲಿ ಯುವ ಜನತೆಗೆ ಮಾರ್ಗದರ್ಶನ ನೀಡುವ ವಸತಿಪರ ತರಬೇತಿ ಕೇಂದ್ರ ಇರಲಿಲ್ಲ, ನಾವು 24/7 ನಮ್ಮಲ್ಲಿಯೇ ಮಕ್ಕಳನ್ನು ಇಟ್ಟುಕೊಂಡು ತರಬೇತಿ ನೀಡುತ್ತಿದ್ದೇವೆ,ಕಾರಣ ಹೆಚ್ಚಿನ ಮಕ್ಕಳು ರಕ್ಷಣಾ ಇಲಾಖೆಗೆ ಆಯ್ಕೆ ಆಗುತ್ತಿದ್ದಾರೆ, ಇದು ನಮ್ಮ ದಕ್ಷಿಣ ಬಾಗಕ್ಕೆ ಗೌರವ ಹೆಚ್ಚಿಸುವ ಸಂಗತಿ ಎಂದು ತಿಳಿಸಿದರು.
ಮೊದಲು ನಮ್ಮ ದೇಶ ಎಂಬುದು ಪ್ರತಿಯೊಬ್ಬ ಭಾರತೀಯನಲ್ಲೂ ಮನದಟ್ಟು ಆಗಲಿ, ದೇಶದ ವಿಷಯದಲ್ಲಿ ಸೈನಿಕರ ತರಹ ಎಲ್ಲರೂ ಒಗ್ಗಟ್ಟಿನಲ್ಲಿ ಇರಬೇಕು ಎಂದು ಶ್ರೀಧರ್ ಕರೆ ನೀಡಿದರು.
