ಮೈಸೂರು: ಮೈಸೂರಿನ ಶ್ರೀರಾಂಪುರದ ರಿಂಗ್ ರಸ್ತೆ, ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ಉದ್ಘಾಟನೆಯನ್ನು ಬಾಲ ಪ್ರತಿಭೆ ಡಾ ಪೃಥು ಪಿ ಅದ್ವೈತ್ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲೆಯ ಅಧ್ಯಕ್ಷ ಮಹೇಶ್ ಕಾಮತ್ ಅವರು ಮಾತನಾಡಿ,ಇಂದಿನ ಒತ್ತಡದ ಜೀವನದಲ್ಲಿ ಸನಾತನ ಧರ್ಮದ ಜಾಗೃತಿ, ಆಚರಣೆ ಮಾಡುವುದು ಕಡಿಮೆ ಆಗುತ್ತಿದೆ ಎಂದು ವಿಷಾದಿಸಿದರು.
ಮಕ್ಕಳು ಮೊಬೈಲ್ ಸೇರಿದಂತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಇಂತಹ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಸಂಸ್ಕಾರ ಕಲಿಸುವ ಕೇಂದ್ರಗಳ ಅವಶ್ಯಕತೆ ಇದೆ. ವಿಶ್ವ ಹಿಂದೂ ಪರಿಷತ್ ಹಾಗೂ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರ ಸಹಯೋಗದಲ್ಲಿ ಮೈಸೂರಿನ ಹಲವೆಡೆ ಇಂತಹ ಸಂಸ್ಕಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಅದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ಪುನೀತ್ ಜಿ ಕೂಡ್ಲೂರು ಮಾತನಾಡಿ,ನಮ್ಮ ಈ ಸಂಸ್ಕಾರ ಕೇಂದ್ರದಲ್ಲಿ ಶ್ಲೋಕ, ವೇದ, ಭಾರತೀಯ ಆಚರಣೆ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಭಜನೆ ಹೀಗೆ ವಿವಿಧ ತರಗತಿಗಳು ನೆಡೆಯಲಿವೆ ಎಂದು ಮಾಹಿತಿ ನೀಡಿದರು.
ಇದೇ ಕೇಂದ್ರದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ಧರ್ಮ, ಸಂಸ್ಕಾರ, ಸಾಹಿತ್ಯ, ಸಂಗೀತ, ಕಲೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶ್ರೀಮತಿ ಇಂದಿರಮ್ಮ ಗುಂಡಪ್ಪ ವೇದಿಕೆ ನಿರ್ಮಿಸಲಾಗಿದೆ. ಸಾರ್ವಜನಿಕರು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಮ್ಮ ಈ ಸಭಾ ಭವನದಲ್ಲಿ ಮಾಡಬಹುದು ಇದರಿಂದ ನಮ್ಮ ಭಾರತೀಯ ಕಲೆ, ಸಂಸ್ಕಾರಗಳ ಉಳಿವಿಗಾಗಿ ನಮ್ಮ ವೇದಿಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸ್ಥಳಾವಕಾಶಕ್ಕಾಗಿ ಸಂಯೋಜಕರಾದ ಗಣೇಶ್ 9449408936 ಅಥವಾ 8105366574 ಮೊಬೈಲ್ ಸಂಪರ್ಕಿಸ ಬಹುದು ಎಂದು ತಿಳಿಸಿದರು.
ಇದೇ ವೇಳೆ ಸಂಸ್ಕಾರ ಕೇಂದ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ವಿಷ್ಣು ಸಹಸ್ರನಾಮ ಪಾರಾಯಣ, ವಿಶ್ವ ಹಿಂದೂ ಪರಿಷತ್ ಸತ್ಸಂಗ ಪ್ರಮುಖರಾದ ಶ್ರೀಮತಿ ರಾಧಾ ಲಕ್ಮಣರಾಜು ರವರ ಸಂಗೀತ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಗುಂಡಪ್ಪ ಪ್ರತಿಷ್ಠಾನ ದ ಅಧ್ಯಕ್ಷರಾದ ಕೆ.ಆರ್.ಗಣೇಶ್, ಸರಸ್ವತಿ, ಪೂಜಾ, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ,ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಾ.ವಿ. ರಾಮಪ್ರಸಾದ್, ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ ಮೈಸೂರು ಅಧ್ಯಕ್ಷ ರಮಾಕಾಂತ್ ಶಣೈ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುವೆಂಪು ನಗರದ ಮುಖ್ಯಸ್ಥರಾದ ಗಣೇಶ್ ಜಿ.ಎಸ್ , ಭಾರತ್ ವಿಕಾಸ್ ಪರಿಷತ್ತಿನ ಪದ್ಮ ಪಾಂಡುರಂಗ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸದಸ್ಯರು, ಗ್ಲೋಬಲ್, ವಿಷ್ಣು ಸಹಸ್ರನಾಮ ಜಿಲ್ಲಾ ಸದಸ್ಯರು, ಧಾರ್ಮಿಕ ಮುಖಂಡರು, ಕೂಡ್ಲೂರು ಗುಂಡಪ್ಪ ಕುಟುಂಬದ ಸದಸ್ಯರು, ಸುಧಾ , ನರಸಿಂಹ ಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
