ಕುಡಿದ ಮತ್ತಲ್ಲಿ ಫಾರ್ಚೂನರ್ ಕಾರು ಚಲಾಯಿಸಿ ಸರಣಿ ಅಪಘಾತಕ್ಕೆ ಕನ್ನಡ ಚಿತ್ರನಟ ಕಾರಣರಾಗಿದ್ದಾರೆ.
ಅದು ಯಾರು ಅಂತೀರಾ,ಮಯೂರ್ ಪಟೇಲ್!
ಜನವರಿ 28 ರಂದು ರಾತ್ರಿ ಬೆಂಗಳೂರಿನ ದೊಮ್ಮಲೂರು ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ.
ಕನ್ನಡ ಚಿತ್ರನಟ ಮಯೂರ್ ಪಟೇಲ್ ಹೀಗೆ ಕುಡಿದು ವಾಹನ ಚಲಾಯಿಸಿದ್ದಾರೆ. ಡಿಕ್ಕಿ ರಭಸಕ್ಕೆ 3 ಕಾರುಗಳು ಜಖಂಗೊಂಡಿವೆ.
ಸಿಗ್ನಲ್ನಲ್ಲಿ ನಿಂತಿದ್ದ ಕಾರುಗಳಿಗೆ ಮಯೂರ್ ಪಟೇಲ್ ಕಾರಿನಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದಿ ದ್ದಾರೆ.
ಕಾರಿನ ಮಾಲೀಕರು ಕೂಡಲೇ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ನಟ ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಅವರು ಕುಡಿದಿರುವುದು ಸಾಬೀತಾಗಿದೆ. ಪ್ರಕರಣ ಸಂಬಂಧ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಯೂರ್ ಪಟೇಲ್ ಚಲಾಯಿಸುತ್ತಿದ್ದ ಫಾರ್ಚೂನರ್ ಕಾರಿಗೆ ಇನ್ಸುರೆನ್ಸ್ ಕೂಡ ಇಲ್ಲ. ಪೊಲೀಸರು ಕಾರು ಸೀಜ್ ಮಾಡಿದ್ದಾರೆ.
ಕಮಾಂಡೋ ಆಸ್ಪತ್ರೆ ಮುಂದಿನ ಸರ್ಕಲ್ನಲ್ಲಿ ಸಿಗ್ನಲ್ ಇತ್ತು. ಹಾಗಾಗಿ ಕಾರುಗಳು ನಿಂತಿದ್ದವು. ಈ ವೇಳೆ ಹಿಂದಿನಿಂದ ಬಂದು ಕಾರುಗಳಿಗೆ ಮಯೂರ್ ಪಟೇಲ್ ಕಾರಿನಿಂದ ಗುದಿದ್ದರು.
ಮುಂದೆ ಇದ್ದ ಸರ್ಕಾರಿ ವಾಹನಕೂಡ ಜಖಂ ಆಗಿದೆ. ಶ್ರೀನಿವಾಸ್ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಟ, ನಿರ್ಮಾಪಕ ಮದನ್ ಪಟೇಲ್ ಪುತ್ರ ಮಯೂರ್ ಪಟೇಲ್ 26 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ್ದರು. ಕೆಲ ಚಿತ್ರದಲ್ಲಿ ನಟಿಸಿದ್ದಾರೆ, ಆದರೆ ಯಾವುದೇ ಸಿನಿಮಾ ದೊಡ್ಡಮಟ್ಟದ ಯಶಸ್ಸು ತಂಡುಕೊಡಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲ.
