ಮೈಸೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಪರಮಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ನಗರದ ಚಾಮುಂಡಿಪುರಂ ವೃತ್ತದಲ್ಲಿ ಹಮ್ಮಕೊಂಡಿದ್ದ ಕಾರ್ಯಕ್ರಮಗಳನ್ನು ಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಶಾಸಕ ಟಿ.ಎಸ್. ಶ್ರೀವತ್ಸ, ಉದ್ಯಮಿ ಅಮರನಾಥ ರಾಜೇ ಅರಸ್, ಬಳಗದ ಅಧ್ಯಕ್ಷರಾದ ಸಂದೀಪ್ ಚಂದ್ರಶೇಖರ್ ಹಾಗೂ ಪದಾಧಿಕಾರಿಗಳು, ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಳಗದ ಅಧ್ಯಕ್ಷ ಸಂದೀಪ್ ಚಂದ್ರಶೇಖರ್ ಅವರು, “ನಡೆದಾಡುವ ದೇವರು, ಅಭಿನವ ಬಸವಣ್ಣ ಎಂದೇ ಖ್ಯಾತರಾಗಿದ್ದ ಸಿದ್ದಗಂಗಾ ಶ್ರೀಗಳ ಬದುಕು ನಮಗೆಲ್ಲರಿಗೂ ದಾರಿದೀಪ ಎಂದು ತಿಳಿಸಿದರು.
ಅನ್ನದಾಸೋಹದ ಜೊತೆಗೆ ಶಿಕ್ಷಣ ದಾಸೋಹದ ಮೂಲಕ ಲಕ್ಷಾಂತರ ಬಡ ಮಕ್ಕಳ ಬಾಳಿಗೆ ಬೆಳಕಾದ ಅವರ ಸಾಮಾಜಿಕ ಕಳಕಳಿ ಸಮಾಜಕ್ಕೆ ಎಂದೆಂದಿಗೂ ಆದರ್ಶ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ನಾಗರಾಜ್, ಜೋಗಿ ಮಂಜು, ಸೋಮಸುಂದರ್, ವಿದ್ಯಾ ಅರಸ್, ಜಗದೀಶ್ ಲಿಂಗಣ್ಣ, ಜೀವಧಾರ ಗಿರೀಶ್, ಬಸವಣ್ಣ, ಕೆ.ಆರ್. ಬ್ಯಾಂಕ್ ಬಸಪ್ಪ, ಸೌಭಾಗ್ಯ ಮೂರ್ತಿ, ಮಂಜುಳಾ, ವಿಜಯಾ, ಪ್ರಕಾಶ್, ಮೋಹನ್, ಬಸವರಾಜ್, ಪ್ರಭು, ಸುರೇಶ್, ಮಹೇಶ್ ಅರಸ್, ಮರಿಸ್ವಾಮಿ, ಲಲಿತಾಂಬ, ದೇವೇಂದ್ರ ಸ್ವಾಮಿ, ರಾಜೇಂದ್ರ, ಶಿವಕುಮಾರ್, ಗುರುಬಸಪ್ಪ, ಪಾರ್ವತಿ, ಕಿರಣ್, ಲತಾ, ಶಿವಶಂಕರ್, ಗಾಯಿತ್ರಿ, ಸಂತೋಷ್, ಕುಶಾಲ್, ಗಿರೀಶ್, ಅನೂಪ್, ದೀಪಕ್, ರಿಂಕು, ಮಧುರಾ, ಶೇಖರ್, ಶಿವಪ್ರಸಾದ್, ರಮೇಶ್, ರಾಜಣ್ಣ, ಯೋಗೇಶ್ ಯಾದವ್, ಮೈಸೂರು ಆನಂದ್ ಮತ್ತಿತರರು ಹಾಜರಿದ್ದರು.
