ಮಂಡ್ಯ: ಜಿಲ್ಲೆಯ ಶ್ರೀ ಕ್ಷೇತ್ರ ನಾಗಮಂಗಲ ತಾಲ್ಲೂಕು,ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ 81 ನೆ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣೋತ್ಸವದ ಸಂದರ್ಭದಲ್ಲಿ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲರ ಗಮನ ಸೆಳೆಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆಗಳಾದ ಡಾ. ಪೃಥು ಪಿ. ಅದ್ವೈತ್, ಮೈಸೂರು, ಘಮನ್ ಮೂರ್ತಿ ಟಿ. ಜೆ. ತರೀಕೆರೆ, ಅಕ್ಷರ ಎಸ್. ಶೆಟ್ಟಿ ಸಣ್ಣಕೆರೆ ಅವರು ಭಾಗವಹಿಸಿದ್ದರು.
ಈ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿದ್ದರು.
ಸಮ್ಮೇಳನದ ವೇಳೆ ಮಾತನಾಡಿದ ಬಾಲಪ್ರತಿಭೆ ಡಾ.ಪೃಥು ಪಿ ಅದ್ವೈತ್ ಅವರು ಮಕ್ಕಳು ಚಿಕ್ಕ ವಯಸ್ಸಿನಿಂದಲೇ ರಾಮಾಯಣ ಹಾಗೂ ಮಹಾಭಾರತ ಓದಬೇಕು ಈ ಮೂಲಕ ತಮ್ಮ ಜೀವನವನ್ನು ಸರಿದಾರಿಯಲ್ಲಿ ಕೊಂಡಯ್ಯಬೇಕು ಎಂದು ಕರೆ ನೀಡಿದರು.
