ಸಿಯೋಲ್: ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ರಾಯಕೀಯ ಅಸ್ಥಿರತೆಗೆ ಕಾರಣವಾಗಿದ್ದ ಮಾರ್ಷಲ್ ಲಾ ಜಾರಿಗೆ ತಂದ ಪ್ರಕರಣದಲ್ಲಿ
ಯೂನ್ ಸುಕ್ ಯೋಲ್ ಅವರಿಗೆ
ಈ ಶಿಕ್ಷೆ ವಿಧಿಸಲಾಗಿದೆ.
2024ರ ಬಳಿಕ ಯೋಲ್ ವಿರುದ್ಧದ ಕ್ರಿಮಿನಲ್ ವಿಚಾರಣೆ ಮತ್ತು ಇತರೆ ಆರೋಪದ ಮೇಲೆ ವಿಧಿಸಲಾದ ಮೊದಲ ಶಿಕ್ಷೆ ಇದು.
ಯೋಲ್ ವಿರುದ್ಧ ಇರುವ ಪ್ರಮುಖ ಪ್ರಕರಣದಲ್ಲಿ ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ಉಂಟಾಗಿದ್ದ ದಂಗೆಯಲ್ಲಿ ಮಾರ್ಷಲ್ ಲಾ ಜಾರಿಗೆ ತಂದಿದ್ದು, ಇದು ಮರಣದಂಡನೆ ಗುರಿಯಾಗುವ ಸಾಧ್ಯತೆ ಇದೆ.
ಶುಕ್ರವಾರ ಸಿಯೋಲ್ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್ ಇತರೆ ಆರೋಪದ ಮೇಲೆ ಯೋಲ್ಗೆ ಶಿಕ್ಷೆ ವಿಧಿಸಿದೆ. ಬಂಧಿಸಲು ಬಂದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪವೂ ಇವರ ಮೇಲಿದೆ.
ಇದಕ್ಕೆ ಮುನ್ನ ಸ್ವಾತಂತ್ರ್ಯ ಮಂಡಳಿ ಯೂನ್ ಅವರಿಗೆ 10 ವರ್ಷದ ಶಿಕ್ಷೆ ವಿಧಿಸುವಂತೆ ಬೇಡಿಕೆ ಇಟ್ಟಿತ್ತು. ಯೂನ್ ಅವರ ಪ್ರತಿವಾದಿ ತಂಡವು ಇದಕ್ಕೆ ಆಕ್ಷೇಪಿಸಿ, ಇದು ರಾಜಕೀಯ ಪ್ರೇರಿತ ಮತ್ತು ಅಂತಹ ಕಠಿಣ ಶಿಕ್ಷೆಗೆ ಒತ್ತಾಯಿಸಲು ಯಾವುದೇ ಕಾನೂನು ಆಧಾರಗಳಿಲ್ಲ ಎಂದು ಪ್ರತಿಪಾದಿಸಿತ್ತು.
ಡಿಸೆಂಬರ್ 2024ರಲ್ಲಿ ಯೂನ್ ರಾಯಕೀಯ ಬಿಕಟ್ಟಿಗೆ ಕಾರಣವಾದ ಮಾರ್ಷಲ್ ಲಾ ಹೇರಿಕೆಯಿಂದಾಗಿ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಸಾರ್ವಜನಿಕ ಪ್ರತಿಭಟನೆ ಉಂಟಾಯಿತು.
ಈ ರಾಜಕೀಯ ಅಸ್ಥಿರತೆ ಬಳಿಕ ಅವರ ವಿರುದ್ಧ ದೋಷಾರೋಪಣೆ ಮಾಡಿ ಕಾನೂನು ಜಾರಿ ಅಧಿಕಾರಿಗಳು ಅವರನ್ನು ಬಂಧಿಸಿದರು. ಬಳಿಕ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಯಿತು.
ಇದೀಗ ಮತ್ತೆ ಯೂನ್ ಸುಕ್ ಯೋಲ್ ಅವರನ್ನು ಬಂಧಿಸಲಾಗಿದೆ,ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
