ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಗಿಲ್ಲೀನೇ ಅಂತ ಎಲ್ಲರೂ ಹೇಳ್ತಿದಾರೆ,ಅದರಲ್ಲೂ
ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಕೂಡಾ ಗಿಲ್ಲೀನೆ ಬಿಗ್ ಬಾಸ್ ಗೆಲ್ಲೋದು ಅಂತ ಹೇಳಿದ್ದು ಗಿಲ್ಲಿ ಅಭಿಮಾನುಗಳು ಫುಲ್ ಖುಷ್.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಪರಿಚಿತರಾದ ಗಿಲ್ಲಿ ಅವರ ಬಾಂಧವ್ಯ ಈಗಲೂ ಗಟ್ಟಿಯಾಗಿದೆ.ಅವರು ಅಪ್ಪಟ ಪ್ರತಿಭೆ ಎಂದು ಶಿವಣ್ಣ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಶಿವಣ್ಣ ಗಿಲ್ಲಿ ನಟನ ಬಗ್ಗೆ ಮಾತನಾಡಿರೊ ವಿಡಿಯೋ ಈಗ ವೈರಲ್ ಆಗಿದೆ.
ಜೀ ಕನ್ನಡದಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಶಿವಣ್ಣಂಗೆ ಗಿಲ್ಲಿ ಪರಿಚಯ ಆಗಿತ್ತು,ಆಗ ಗಿಲ್ಲಿಯನ್ನು ನೋಡಿ ಶಿವಣ್ಣ ಇಂಪ್ರೆಸ್ ಆಗಿದ್ದರು. ಈಗ ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದು ಎಂದು ಶಿವರಾಜ್ಕುಮಾರ್ ಭವಿಷ್ಯ ನುಡಿದಿದ್ದಾರೆ.ಈ ವಿಡಿಯೋ ವೈರಲ್ ಆಗಿದೆ,ಇದೀಗ ಎಲ್ಲೆಲ್ಲೂ ಶಿವಣ್ಣ ಹೇಳಿರೊ ಬಗ್ಗೇನೆ ಮಾತುಗಳು.
ಕಾರ್ಯಕ್ರಮವೊಂದರಲ್ಲಿ ಗಿಲ್ಲಿಯೇ ಗೆಲ್ಲೋದು ಎಂದು ಟೇಬಲ್ ತಟ್ಟಿ ಶಿವಣ್ಣ ಹೇಳಿದ್ದಾರೆ, ಜತೆಗೆ ಗಿಲ್ಲಿಗೆ ಆಲ್ ದಿ ಬೆಸ್ಟ್ ಕೂಡ ಹೇಳಿದ್ದಾರೆ. ಈ ವಿಡಿಯೋ ನೋಡಿದ ಗಿಲ್ಲಿ ಅಭಿಮಾನಿಗಳೆಗೆ ಖುಷಿಯೊ ಖುಷಿ.
