ಮೈಸೂರು: ನಗರದ ವಿನೋಬ ರಸ್ತೆಯಲ್ಲಿರುವ ಅಲಮ್ಮ ಕಲ್ಯಾಣ ಮಂಟಪದಲ್ಲಿ ಲಿಟಲ್ ಏಲಿ ಮೈಸೂರು ಪೂರ್ವ ಪ್ರಾಥಮಿಕ ಶಾಲಾ ವತಿಯಿಂದ ಸುಗ್ಗಿ ಹಬ್ಬ ಸಂಭ್ರಮದಿಂದ ಜರುಗಿತು.
ಮಕರ ಸಂಕ್ರಾಂತಿ ಹಬ್ಬದ ಪ್ರಾಮುಖ್ಯತೆ ಹಾಗೂ ಹಬ್ಬದ ವಿಶೇಷತೆ ಯಾಗಿರುವ ಧಾನ್ಯಗಳ ಪೂಜೆ ಎಳ್ಳು ಬೆಲ್ಲ ಹಂಚುವುದು ಇತರೆ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯ ಪ್ರದೇಶಿಸಿದರು,ಬಾಲ್ಯದಿಂದಲೇ ಹಬ್ಬಗಳ ಮಾಹಿತಿ ವಿದ್ಯಾರ್ಥಿಗಳಿಗೆ ಇರಬೇಕು ಎಂಬ ಕಾರಣಕ್ಕೆ ದೇಶದ ವಿವಿಧ ಹಬ್ಬಗಳು ಹಾಗೂ ವೇಷಭೂಷಣಗಳ ಬಗ್ಗೆ ಅರಿವು ಮೂಡಿಸಲು ಸುಗ್ಗಿ ಹಬ್ಬ ಕಾರ್ಯಕ್ರಮ ಶಾಲೆಗಳಲ್ಲಿ ಆಚರಿಸುವುದು ನಿಜಕ್ಕೂ ಅರ್ಥಪೂರ್ಣ.
ಮುಂದಿನ ಪೀಳಿಗೆಯ ಯುವಕರಿಗೆ ಹಬ್ಬಗಳ ಆಚರಣೆಯ ಬಗ್ಗೆ ಹೆಚ್ಚು ಅರಿವಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಅಮಿತ್ ತಿವಾರಿ,ಶ್ರೀನಾಥ್, ಶಿಲ್ಪ ಅಕ್ಷಯ್, ಸುಷ್ಮಾ ದಿಲೀಪ್, ಲಕ್ಷ್ಮಿ ರವಿ, ಅಪೂರ್ವ, ಆಜಿರ ಹಾಗೂ ಶಾಲೆಯ ಶಿಕ್ಷಕ ವೃಂದ ಪೋಷಕರು ಹಾಜರಿದ್ದರು.
