ತುಮಕೂರು: ರಾತ್ರಿ ಪಾಳಿ ಕೆಲಸ ಮುಗಿಸಿ ತುಮಕೂರಿಗೆ ವಾಪಸ್ಸು ಬರುವಾಗ ಭೀಕರ ಅಪಘಾತ ಸಂಭವಿಸಿ ಮೂವರು ವಾಚ್ ಮನ್ ಗಳು ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ತುಮಕೂರು ತಾಲೂಕಿನ ನಂದಿಹಳ್ಳಿ ಹೆದ್ದಾರಿಯಲ್ಲಿ ಕಂಟೇನರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ,
ತುಮಕೂರು ಮೂಲದ ರಾಜೇಶ್ (25) ದನಂಜಯ್ (27)
ಧನುಷ್ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದಾಬಸಪೇಟೆಯ ಎಂ.ಇ.ಸೋಲಾರ್ ಪ್ಲಾಂಟ್ ನಲ್ಲಿ ಈ ನತದೃಷ್ಟರು ಕೆಲಸ ನಿರ್ವಹಿಸುತ್ತಿದ್ದರು.ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಅಘಾತವಾಗಿದೆ.

ಸ್ಥಳಕ್ಕೆ ಎಎಸ್ಫಿ ನಾಗರಾಜ್, ಡಿವೈಎಸ್ಪಿ ಚಂದ್ರಶೇಖರ್, ಕ್ಯಾತ್ಸಂದ್ರ ಸಿಪಿಐ ರಾಮ್ ಪ್ರಸಾದ್ ಬೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
