ಶಾಸಕ ಹರೀಶ್ ಗೌಡ ಕಚೇರಿಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ

Spread the love

ಮೈಸೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮೈಸೂರಿಗೆ ಆಗಮಿಸಿದ್ದು,ಈ ವೇಳೆ ಶಾಸಕ ಹರೀಶ್ ಗೌಡ ಅವರ ಕಚೇರಿಗೂ ಭೇಟಿ ನೀಡಿದ್ದರು.

ಹುಣಸೂರು ರಸ್ತೆ, ಜಲದರ್ಶಿನಿ ಯಲ್ಲಿರುವ ಶಾಸಕ ಹರೀಶ್ ಗೌಡ ಕಚೇರಿಗೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಗೌಡ ಅವರು ಸತೀಶ್ ಜಾರಕಿ ಹೊಳಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಶುಭ ಕೋರಿದರು.

ಈ ವೇಳೆ ಶಾಸಕರಾದ ರವಿಶಂಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್, ಮುಖಂಡರಾದ ಎಸ್ ಆರ್ ರವಿಕುಮಾರ್,ನವೀನ್, ಲೋಕೇಶ್ ಮಾದಾಪುರ ಹಾಜರಿದ್ದರು.