ಮೈಸೂರು: ಸಂವಿಧಾನ, ಕಾನೂನು ಜೊತೆಗಿದ್ದರೂ ಹೆಣ್ಣಿನ ಮೇಲಿನ ದೌರ್ಜನ್ಯ, ಅತ್ಯಾಚಾರ, ಶೋಷಣೆ ಇನ್ನೂ ನಿಂತಿಲ್ಲ ಎಂದು ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜದ ಅಧ್ಯಕ್ಷೆ ಸವಿತಾ ಗೌಡ ವಿಷಾದಿಸಿದರು.
ಮೈಸೂರಿನ ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜ ಕುವೆಂಪುನಗರ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೆಣ್ಣಿನ ಕಣ್ಣೀರು ಕೂನೆಯಾಗಲಿ, ಸುಭದ್ರ ಸಮಾಜ ನಿರ್ಮಾಣವಾಗಲಿ, ರಾಜ್ಯದಲ್ಲಿ ಶಾಂತಿ ನೆಲಸಲಿ ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ವಿಜಯ ಮಂಜಪ್ಪ, ರಾಜೇಶ್ವರಿ ನಾಗರಾಜ ಅವರುಗಳು ಸಂಘಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಅವರುಗಳನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಲೀಲಾ ಗಂಗಾಧರ,ದೇವಿಕಾ, ಜಯಮ್ಮ, ಭಾಗ್ಯ ಪುರುಷೋತ್ತಮ,ಸವಿತಾ ಶಿವರಾಮ, ಲತಾರಮೇಶ, ಸುನಂದ,ಜಾಹ್ನವಿ ದಿನೇಶ್ ಉಪಸ್ಥಿತರಿದ್ದರು.
