ಬೆಂಗಳೂರು: ರಾಜ್ಯದಲ್ಲಿನ ಜಿಲ್ಲಾ ಆಸ್ಪತ್ರೆಗಳು ಸಮರ್ಪಕ ಸೌಲಭ್ಯಗಳಿಲ್ಲದೆ ಪ್ರತಿ ದಿವಸ ಲಕ್ಷಾಂತರ ರೋಗಿಗಳು ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದಾರೆ ಎಂದು ಆಪ್ ಸರ್ಕಾರದ ಗಮನ ಸೆಳೆದಿದೆ.
ಡಯಾಲಿಸಿಸ್ ಸೇರಿದಂತೆ ಹಲವಾರು ರೋಗನಿರ್ಣಯ ಪರೀಕ್ಷೆಗಳು ಮತ್ತು ಮುನ್ನೆಚ್ಚರಿಕಾ ಆರೈಕೆ ಸೇವೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ದೂರಿದೆ.
ಬಡ ನಾಗರಿಕರು ದುಬಾರಿ ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗದೆ ಪ್ರತಿ ದಿನಾ ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.ಈ ಎಲ್ಲ ದುರ್ವ್ಯವಸ್ಥೆಯನ್ನು ತಪ್ಪಿಸಲು ಕೂಡಲೇ ರಾಜ್ಯ ಸರ್ಕಾರ ವು ಮುಂದಿನ ಬಜೆಟ್ ನಲ್ಲಿ ಪಂಜಾಬ್ ರಾಜ್ಯ ಸರ್ಕಾರದ ಮಾದರಿಯಲ್ಲಿ 10 ಲಕ್ಷ ರೂಪಾಯಿಗಳ ಮುಖ್ಯಮಂತ್ರಿಗಳ ಆರೋಗ್ಯ ವಿಮಾ ಯೋಜನೆಯನ್ನು ಕೂಡಲೇ ಈ ಬಜೆಟ್ ನಲ್ಲಿ ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸುದ್ದಿಗೋಷ್ಠಿಯಲ್ಲಿ ಸೀತಾರಾಮ್ ಗುಂಡಪ್ಪ ಒತ್ತಾಯಿಸಿದರು.
ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ ಮಾನ್ ಸಿಂಗ್ ಈಗಾಗಲೇ ಯಾವುದೇ ಆರ್ಥಿಕ ಮಿತಿ ಇಲ್ಲದೆ ಆ ರಾಜ್ಯದ ಮೂರು ಕೋಟಿಗೊ ಹೆಚ್ಚು ಕುಟುಂಬಗಳಿಗೆ ಮುಖ್ಯಮಂತ್ರಿಗಳ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದು ಹೇಳಿದರು.
ಈ ಯೋಜನೆಯನ್ನು ಕೂಡಲೇ ರಾಜ್ಯದಲ್ಲೂ ಘೋಷಿಸಿದರೆ ಪ್ರತಿ ದಿನಾ ಆರ್ಥಿಕ ತೊಂದರೆಯಿಂದ ಸೂಕ್ತ ಚಿಕಿತ್ಸೆ ಪಡೆಯಲಾರದೆ ಸಾವನ್ನಪ್ಪುತ್ತಿರುವ ಲಕ್ಷಾಂತರ ಕುಟುಂಬಗಳನ್ನು ಉಳಿಸಬಹುದು ಕೂಡಲೇ ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೇಕೆಂದು ಸೀತಾರಾಂ ಗುಂಡಪ್ಪ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ಮಾತನಾಡಿ,ಕರ್ನಾಟಕವನ್ನು ಭಾರತದ ವೇಗವಾಗಿ ಬೆಳೆಯುವ ರಾಜ್ಯವಾಗಲು ಅಗತ್ಯವಾದ ಪ್ರತಿಭೆ ಗಳು, ಕೈಗಾರಿಕೆ ಗಳು, ಬಂದರುಗಳು,ತಂತ್ರಜ್ಞಾನ ಮತ್ತು ರೈತರು ನಮ್ಮೊಂದಿಗಿದ್ದಾರೆ. ಈ ಎಲ್ಲವುಗಳನ್ನು ಸಾಧಿಸಲು ಯಾವುದೇ ಹಣಕಾಸಿನ ಕೊರತೆ ನಮ್ಮಲ್ಲಿ ಇಲ್ಲ. ಹಣದ ಸೋರಿಕೆ ರಾಜ್ಯ ಸರ್ಕಾರಕ್ಕಾಗಿರುವ ನಿಜವಾದ ಕೊರೊನ ರೋಗ ಎಂದು ಟೀಕಿಸಿದರು.
ವರ್ಷಕ್ಕೆ 1 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತದ ಒಪ್ಪಂದಗಳು ಮತ್ತು ಟೆಂಡರ್ಗಳ ಮೂಲಕ ಖರ್ಚಾಗುತ್ತಿದೆ. ಗುತ್ತಿಗೆದಾರರ ಸಂಘವು ಆರೋಪಿಸಿರುವಂತೆ ಯೋಜನೆಗಳ ಮೌಲ್ಯದ ಶೇ 20-40 ಕಮಿಷನ್ ವರ್ಷಕ್ಕೆ 20,000–30,000 ಕೋಟಿ ಆಗುತ್ತದೆ. ಈ ಹಣದಿಂದ ಪ್ರತಿ ಜಿಲ್ಲೆಗೆ 100ರಂತೆ 4000 ವಿಶ್ವಮಟ್ಟದ ಶಾಲೆಗಳ ನಿರ್ಮಾಣ ಮಾಡಬಹುದು.
ರಾಜ್ಯದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಮುಂದಿನ ಪೀಳಿಗೆಯ ಮಕ್ಕಳನ್ನು ಆಧುನಿಕ ಶಿಕ್ಷಣವಂತರನ್ನಾಗಿ ಮಾಡಿ ದೇಶವನ್ನು ಮತ್ತಷ್ಟು ಬಲಪಡಿಸಬಹುದು ಎಂದು ಪ್ರಕಾಶ್ ತಿಳಿಸಿದರು.
