ಮೈಸೂರು: ಮೈಸೂರು ಉಪವಿಭಾಗಾಧಿಕಾರಿಯಾಗಿದ್ದ ಪ್ರಸ್ತುತ ಅಮಾನತ್ತಿನಲ್ಲಿರುವ ನಂದೀಶ್ ವಿರುದ್ದ ಸರ್ಕಾರದ ಆದೇಶದ ಹಿನ್ನಲೆ ಎಫ್ಐಆರ್ ದಾಖಲಾಗಿದೆ.
ನಂದೀಶ್ ಅವರ ಕರ್ತವ್ಯದ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದ ಹಿನ್ನಲೆಯಲ್ಲಿ ಸರ್ಕಾರದ ಆದೇಶದಂತೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂದೀಶ್ ಕರ್ತವ್ಯ ನಿರ್ವಹಿಸಿದ 22-2-2024 ರಿಂದ 7-6-2024 ರವರೆಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 46 ಪ್ರಕರಣಗಳಿಗೆ ಸಂಭಂಧಿಸಿದಂತೆ ವಿಚಾರಣೆಗೆ ಅವಕಾಶ ಕೊಡದೆ,ದಾಖಲೆಗಳನ್ನೂ ಪಡೆದುಕೊಳ್ಳದೆ,ವಿಚಾರಣೆಗೆ ತೆಗೆದುಕೊಂಡ ದಿನಾಂಕದಿಂದ ಆದೇಶ ಕಾಯ್ದಿರಿಸಿ ಆದೇಶ ಹೊರಡಿಸಿರುತ್ತಾರೆ.
ಕಕ್ಷಿದಾರರಿಗೆ ತಮ್ಮನಿಲುವು ಮಂಡಿಸಲು ಅವಕಾಶ ಕೊಡದೆ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪವಿದ್ದು,ಅವರ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.
ಈ ಹಿನ್ನಲೆಯಲ್ಲಿ ನಂದೀಶ್ ವಿರುದ್ದ ಎಫ್ಐಆರ್ ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ.
ಹಾಗಾಗಿ ಜಿಲ್ಲಾಧಿಕಾರಿಯವರ ಆದೇಶದಂತೆ ಗ್ರೇಡ್ 2 ತಹಸೀಲ್ದಾರ್ ರಾಜು ಅವರು ನಜರಬಾದ್ ಪೊಲೀಸ್ ಠಾಣೆಯಲ್ಲಿ ನಂದೀಶ್ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.
