ನಾಗರಹೊಳೆ: ನಾಗರಹೊಳೆಯಲ್ಲಿ ಪ್ರಾಣಿ ಪ್ರಿಯರು ಮತ್ತು ಪ್ರವಾಸಿಗರಿಗೆ ಖುಷಿಯೋ ಖುಷಿ.
ಯಾಕಂದರೆ ಬೆಳ್ಳಂ ಬೆಳಿಗ್ಗೆ ಹುಲಿಗಳ ದರುಶನವಾಗಿದೆ ಅದಕ್ಕೆ.
ಮೊದಲು ಒಂದು ಹುಲಿ ನಿದಾನವಾಗಿ ದರುಶನ ತೋರಿ ಒಂದೆರಡು ಸೆಕೆಂಡ್ ನಿಂತು ಉಳಿದ ಹುಲಿಗಳಿಗೆ ಕಾದಿದೆ.ಅದರ ಹಿಂದೇನೆ ಮತ್ತೊಂದು ಹುಲಿ ಓಡೋಡಿ ಬಂದಿದೆ, ಅದರ ಹಿಂದೆ ಇನ್ನೂ ಒಂದು ಹುಲಿ.
ಒಟ್ಟೊಟ್ಟಿಗೆ ಮೂರು ಹುಲಿಗಳ ಅಡ್ಡಾಡುತ್ತಾ ಸಾಗಿದವು.ಅವುಗಳನ್ನು ಕಂಡು ಪುಳಕಿತರಾದ ಪ್ರವಾಸಿಗರು ಖುಷಿಯಿಂದ ತಮ್ಮ,ತಮ್ಮ,ಮೊಬೈಲ್ ಗಳನ್ನ ಹೊರತೆಗೆದು ಹುಲಿಗಳ ಚಿತ್ರಗಳನ್ನು ಸೆರೆಹಿಡಿದಿದ್ದಾರೆ.ಮತ್ತೆ ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಸಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
