ಜಾವಾ: ಇಂಡೋನೇಷ್ಯಾದ ಜಾವಾ ಸಮುದ್ರದಲ್ಲಿವರ್ಗೋ ಟ್ರಾನ್ಸ್ಪೋರ್ಟ್ 8 ಎಂಬ ಹಡಗು ಉರುಳಿದ ಪರಿಣಾನ 6 ಮಂದಿ ಮೃತಪಟ್ಟಿದ್ದಾರೆ 105 ಇನ್ನೂ ನಾಪತ್ತೆಯಾಗಿದ್ದಾರೆ.
213 ಪ್ರಯಾಣಿಕರು ಮತ್ತು 30 ಸಿಬ್ಬಂದಿ ಸೇರಿದಂತೆ ಒಟ್ಟು 243 ಜನರನ್ನು ಈ ನತದೃಷ್ಟ ಶಿಪ್ ಹೊತ್ತೊಯ್ಯುತ್ತಿತ್ತು.
ಪೂರ್ವ ಜಾವಾದ ಸುರಾಬಯಾದಿಂದ ಬೋರ್ನಿಯೊದ ಬಂಜಾರ್ಮಾಸಿನ್ಗೆ ಹೊರಟಿತ್ತು.ಹವಾಮಾನ ವೈಪರೀತ್ಯದಿಂದಾಗಿ ಭಾನುವಾರ ಹಡಗು ಸಂಪರ್ಕ ಕಳೆದುಕೊಂಡಿತು.
ಇದುವರೆಗೆ 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ, 6 ಜನ ಮೃತಪಟ್ಟಿದ್ದಾರೆ ಮತ್ತು ಇನ್ನೂ ಹಲವರು ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 129 ಜನರು ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಇಂಡೋನೇಷ್ಯಾದ ರಾಷ್ಟ್ರೀಯ ರಕ್ಷಣಾ ಸಂಸ್ಥೆ, ಕೋಸ್ಟ್ ಗಾರ್ಡ್ ಮತ್ತು ನೌಕಾದಳದ 600ಕ್ಕೂ ಹೆಚ್ಚು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಾಪತ್ತೆಯಾದವರನ್ನು ಪತ್ತೆಹಚ್ಚಲು 17 ಹಡಗುಗಳು, 5 ಹೆಲಿಕಾಪ್ಟರ್ಗಳು ಹಾಗೂ ನೌಕಾದಳದ ಅಂಡರ್ ವಾಟರ್ ಡ್ರೋನ್ಗಳನ್ನು ನಿಯೋಜಿಸಲಾಗಿದೆ. ಸಮುದ್ರದಲ್ಲಿ ಏಳುತ್ತಿರುವ 3 ಮೀಟರ್ಗಳಿಗೂ ಎತ್ತರದ ಅಲೆಗಳು ಮತ್ತು ಬಲವಾದ ಗಾಳಿಯಿಂದ ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆಯಾಗುತ್ತಿದೆ.
ಹಡಗು ಯಾವುದೇ ಓವರ್ಲೋಡ್ ಹೊಂದಿರಲಿಲ್ಲ ಮತ್ತು ಅದು ತನ್ನ ಗರಿಷ್ಠ ಸಾಮರ್ಥ್ಯಕ್ಕಿಂತ (500 ಜನ) ಕಡಿಮೆ ಜನರನ್ನು ಹೊತ್ತೊಯ್ಯುತ್ತಿತ್ತು, ಕೆಟ್ಟ ಹವಾಮಾನ ಮತ್ತು ಬಲವಾದ ಅಲೆಗಳು ಹಡಗಿನ ಬಲಭಾಗಕ್ಕೆ ಬಡಿದ ಕಾರಣ ನಿಯಂತ್ರಣ ಕಳೆದುಕೊಂಡು ಮಗುಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
