ಮೈಸೂರು: ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಮಗುವಿನ ಮೇಲೆ ಖಾಸಗಿ ಶಾಲಾ ಬಸ್ ಹರಿದ ಹೃದಯ ವಿದ್ರಾವಕ ಘಟನೆ
ಹುಣಸೂರು ತಾಲೂಕು ನಂಜಾಪುರ ಗ್ರಾಮದಲ್ಲಿ ನಡೆದಿದೆ.
ಬಸವರಾಜು ಮತ್ತು ಕಾಂಚನ ದಂಪತಿಯ ಪುತ್ರಿ ಲತೀಕ್ಷಾ (1.5 ವರ್ಷ) ಮೃತಪಟ್ಟ ಕಂದ
ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಶಾಲಾ ಬಸ್ ನಲ್ಲಿ ಬಸವರಾಜು ಅವರ ಹಿರಿಯ ಪುತ್ರ ತಿಲಕ್ ಶಾಲೆಯಿಂದ ಮನೆಗೆ ಬಂದಿದ್ದ. ತಿಲಕ್ ನನ್ನು ಬಸ್ ನಿಂದ ಇಳಿಸಿಕೊಂಡು ಮನೆಗೆ ಕರೆದೊಯ್ಯುವ ವೇಳೆ ಚಾಲಕ ರಿವರ್ಸ್ ತೆಗೆಯುವಾಗ ನಿರ್ಲಕ್ಷ್ಯದಿಂದ ಮಗುವಿನ ಮೇಲೆ ಬಸ್ ಹರಿದು ಕಂದ ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆ ಸಂಬಂಧ ಬಿಳಿಕೆರೆ ಠಾಣಾ ಪೊಲೀಸರು ಚಾಲಕ ಸಿದ್ದರಾಜುನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ.
ಮಗುವಿನ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.
