ಧುರಂಧರ್ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಎಲ್ಲರಿಗೂ ಗೊತ್ತಿರೊ ವಿಷಯಾನೆ.ಆದರೆ ಸಿನಿಮಾ ಬ್ಯಾನ್ ಆಗಿದ್ದ ಪಾಕ್ ನಲ್ಲೂ ಚಿತ್ರದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿರೋದು ಹೊಸಾ ಸುದ್ದಿ….!
ಈಗ ‘ಧುರಂಧರ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.ಇಂದು ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ, ಮಾರ್ಚ್ ನಲ್ಲಿ ಈ ಸಿನೆಮಾ ಬಿಡುಗಡೆ ಯಾಗಲಿದೆ.
ಪಾಕಿಸ್ಥಾನದಲ್ಲಿ ‘ಧುರಂಧರ್ ಚಿತ್ರವನ್ನು ಬ್ಯಾನ್ ಮಾಡಲಾಗಿದೆ.ಆದರೆ
ಒಟಿಟಿಯಲ್ಲೇ ಅಲ್ಲಿನ ಜನ ನೋಡಿ ಮೆಚ್ಚಿಕೊಂಡಿದ್ದಾರೆ.
ಅಲ್ಲಿನ ಪ್ರೇಕ್ಷಕರು ಧುರಂಧರ್ ಚಿತ್ರವನ್ನು
ನೋಡಿ ವಿಮರ್ಶೆ ಕೂಡಾ ತಿಳಿಸುತ್ತಿದ್ದಾರೆ. ಪಾಕಿಸ್ತಾನದ ಲಿಯಾರಿ ಎಂಬ ಪ್ರದೇಶದಲ್ಲಿ ನಡೆದ ಕಥೆ. ಸಿನಿಮಾ ನೋಡಿ ಪಾಕ್ ಜನಾನೆ ಫುಲ್ ಖುಷ್ ಆಗಿಬಿಟ್ಟಿದ್ದಾರೆ.
ಧುರಂಧರ್ ಸಿನಿಮಾ ಪಾಕಿಸ್ತಾನದ ಚಿತ್ರಮಂದಿರಗಳಲ್ಲಿ ಅಷ್ಟೇ ಅಲ್ಲಾ ಇನ್ನೂ ಹಲವು ರಾಷ್ಟ್ರಗಳಲ್ಲೂ ಬ್ಯಾನ್ ಮಾಡಲಾಗಿತ್ತು.
ಆದರೆ ಈಗ ಒಟಿಟಿಯಲ್ಲಿ ಧುರಂಧರ್ ಬಿಡುಗಡೆ ಆಗಿದೆ. ಪಾಕಿಸ್ತಾನೀಯರು ನೆಟ್ಫ್ಲಿಕ್ಸ್ ಮೂಲಕ ಈ ಚಿತ್ರ ನೋಡಿ, ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆ ಕೂಡಾ ಹಂಚಿಕೊಳ್ಳುತ್ತಿದ್ದಾರೆ.
2000ನೇ ಇಸವಿ ವೇಳೆ ಪಾಕಿಸ್ತಾನ ಯಾವ ರೀತಿ ಇತ್ತು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ, ಅದನ್ನು ನೋಡಿ ಪಾಕ್ ಜನ ಫಿದಾ ಆಗಿದ್ದಾರೆ.ನಮಗೆ ಆ ಕಾಲಕ್ಕೆ ಹೋಗಿ ಬಂದ ಅನುಭವ ಆಯಿತು ಎಂದು ಮೆಚ್ಚುಗೆ ಮಾತನಾಡಿದ್ದಾರೆ.
ಸಿನಿಮಾದಲ್ಲಿ ಪಾಕಿಸ್ತಾನದ ಗ್ಯಾಂಗ್ಸ್ಟರ್ ರೆಹಮಾನ್ ಡಕಾಯಿತ್ ಪಾತ್ರವನ್ನು ಅಕ್ಷಯ್ ಖನ್ನಾ ಅವರು ಮಾಡಿದ್ದಾರೆ. ಅರ್ಜುನ್ ರಾಮ್ಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಕೂಡ ಪ್ರಮುಖ ಪಾತ್ರಗಳಿಗೆ ನಟಿಸಿರುವುದು ವಿಶೇಷ.
