ಇಸ್ಲಾಮಾಬಾದ್: ಭಾರತಕ್ಕೆ ಬೇಕಿದ್ದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಕಮಾಂಡರ್ ಮೌಲಾನಾ ಸಲ್ಮಾನ್ ಅಜರ್ ಕತೆ ಮುಗಿದ ಬೆನ್ನಲ್ಲೇ ಇದೀಗ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಜ್ಜದ್ ಅಹ್ಮದ್ ಕೂಡಾ ಮೃತಪಟ್ಟಿದ್ದಾನೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಸಜ್ಜದ್ ಅಹ್ಮದ್ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ
ಇಸ್ಲಾಮಾಬಾದ್ ನಲ್ಲಿರುವ ತನ್ನ ಮನೆಯಲ್ಲೇ
ಸಜ್ಜದ್ ಅಹ್ಮದ್ ಶವ ಪತ್ತೆಯಾಗಿದೆ,ಸ್ಥಳೀಯರು ಆತನ ಸಾವನ್ನು ದೃಢಪಡಿಸಿದ್ದಾರೆ.
ಅಪರಿಚಿತ ದಾಳಿಕೋರರು ಉಗ್ರನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ಈ ಪ್ರದೇಶದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಸಜ್ಜದ್ ಅಹ್ಮದ್ ಕುಖ್ಯಾತ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ.
