ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನದಲ್ಲಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಮೈಸೂರಿನ ಅಗ್ರಹಾರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ವಾಸು, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ, ಡೈರಿ ವೆಂಕಟೇಶ್, ಲೋಕೇಶ್, ಎಸ್ ಎನ್ ರಾಜೇಶ್, ಕೃಷ್ಣಪ್ಪ (ಗಂಟಯ್ಯ), ಚನ್ನಪ್ಪ, ನಿತೀಶ್ ಕುಮಾರ್, ದೀಪಕ್, ರವಿಚಂದ್ರ, ಹರೀಶ್ ನಾಯ್ಡು, ಮೋಹನ್ ಮತ್ತಿತರರು ಹಾಜರಿದ್ದು ಕಾಂಗ್ರೆಸ್ ಪಕ್ಷಕ್ಕೆ ಜಯಕಾರ ಕೂಗಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಖುಷಿ ವ್ಯಕ್ತಪಡಿಸಿದರು.
