ಬೆಂಗಳೂರು: ಲಿವ್-ಇನ್ ರಿಲೇಶನ್ಶಿಪ್ ವಿರೋಧಿಸಿದ್ದಕ್ಕೆ ತಂದೆ,ತಾಯಿ ಮತ್ತು ತಂಗಿಯನ್ನು ಮನೆಯ ಹಿರಿ ಮಗಳು ಬರ್ಭರವಾಗಿ ಹತ್ಯೆ ಮಾಡಿರುವ ಅತಂತ ಹೇಯ ಘಟನೆ ಬೆಂಗಳೂರಿನ
ಕೆ.ಆರ್. ಪುರಂನಲ್ಲಿ ನಡೆದಿದೆ
ಬೆಂಗಳೂರಿನ ಕೆ.ಆರ್. ಪುರಂ ವ್ಯಾಪ್ತಿಯ ಸೀಗೇಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ
ಈ ಘೋರ ಘಟನೆ ನಡೆದಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಸೋಮಸುಂದರ್ (55), ಅವರ ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಕಿರಿಯ ಮಗಳು ಸುಪ್ರಿಯಾ ಕೊಲೆಯಾದ ದುರ್ದೈವಿಗಳು.
ಸೋಮಸುಂದರ್ (55), ಅವರ ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಕಿರಿಯ ಮಗಳು ಸುಪ್ರಿಯಾ (20).
ಸೋಮಸುಂದರ್-ಮುತ್ತುಲಕ್ಷ್ಮಿ ದಂಪತಿಯ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್ ಕೊಲೆ ಮಾಡಿದ ಪಾಪಿಗಳು.
ಕೆಲ ದಿನಗಳಿಂದ ಶ್ವೇತಾ ಮತ್ತು ಕೆನೆತ್ ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದರು. ಇದು ಗೊತ್ತಾಗಿ ಸೋಮಸುಂದರ್ ಮತ್ತು ಪತ್ನಿ ಮಗಳಿಗೆ ಬೈದು ಬುದ್ದಿ ಹೇಳಿದ್ದರು.
ಆದರೂ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್ ಆಟ ಮುಂದುವರಿದಿತ್ತು.ಇದಕ್ಕೆ ಸೋಮಸುಂದರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಶ್ವೇತಾ ಬಹಳ ಸಾಲ ಮಾಡಿದ್ದಳು.ಈ ವಿಚಾರವಾಗಿ ಕುಟುಂಬದಲ್ಲಿ ಜಗಳ ನಡೆದಿತ್ತು. ಜೂನ್ 22ರ ರಾತ್ರಿ ಕೂಡಾ ಜೋರಾಗಿ ಜಗಳವಾಗಿದೆ.ಆಗ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್ ಸೇರಿ ಚಾಕುವಿನಿಂದ ಸೋಮಸುಂದರ್, ಮುತ್ತುಲಕ್ಷ್ಮಿ ಮತ್ತು ಕಿರಿಯ ಮಗಳು ಸುಪ್ರಿಯಾಳನ್ನು ಮನ ಬಂದಂತೆ ಇರಿದು ಭೀಕರವಾಗಿ ಚುಚ್ವಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಅಕ್ಕಪಕ್ಕದವರು ಕೆ ಆರ್ ಪೊಲೀಸರಿಗೆ ಮಾಹಿತಿ ನೀಡಿದ್ದು,ಇಬ್ಬರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
