ಮೈಸೂರು: ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರೂ ಧಾರ್ಮಿಕ ಮುಖಂಡರಾದ ಡಾ. ಎನ್. ಶಶಿಶೇಖರ್ ದೀಕ್ಷಿತ್ ಅವರನ್ನು
ಮಯೂರ ಕನ್ನಡ ಯುವಕರ ಬಳಗದಿಂದ ಗೌರವಿಸಲಾಯಿತು.
ಇಂದು ಶಶಿಶೇಖರ್ ದೀಕ್ಷಿತ್ ಅವರ ಜನುಮದಿನ.ಹಾಗಾಗಿ ಮಯೂರ ಕನ್ನಡ ಯುವಕರ ಬಳಗದವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು.
ಕೃಷ್ಣರಾಜ ಪೊಲೀಸ್ ಠಾಣೆಯ
ಎಸಿಪಿ ಪ್ರಕಾಶ್, ಮುಖಂಡರಾದ ಜಿ ರಾಘವೇಂದ್ರ, ನಜರ್ಬಾದ್ ನಟರಾಜ್, ಕಿರಣ್ ಗೋಪಾಲ್, ವಿಕ್ರಂ ಅಯ್ಯಂಗಾರ್, ಮಂಜೇಶ್,ಕಡಕೋಳ ಜಗದೀಶ್, ಗಗನ್ ಗೌಡ, ಮಹೇಂದ್ರ ಶೈವ,ಹರೀಶ್ ನಾಯ್ಡು, ಅಮಿತ್, ಕುಮಾರ , ರಮೇಶ್ ಬಾಬು, ಮತ್ತಿತರರು ಶುಭ ಹಾರೈಸಿದರು.
