ಮೈಸೂರು: ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್ ನ ಅಡುಗೆ ಘಟಕದ ರಾಜ್ಯಾಧ್ಯಕ್ಷರಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಹೆಚ್ ಎನ್ ಶ್ರೀಧರರ್ಮೂರ್ತಿ ನೇಮಕವಾಗಿದ್ದಾರೆ.
ನಗರದ ದಾಸ ಪ್ರಕಾಶ್ ಪ್ಯಾರಡೈಸ್
ಹೋಟೆಲ್ ನಲ್ಲಿ ನಡೆದ
ಅಭಿನಂದನಾ ಸಮಾರಂಭದಲ್ಲಿ ಹೆಚ್ ಎನ್ ಶ್ರೀಧರರ್ಮೂರ್ತಿ ಅವರನ್ನು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪದಾಧಿಕಾರಿಗಳು ಅಭಿನಂದಿಸಿ ಸನ್ಮಾನಿಸಿದರು.
ಈ ವೇಳೆ ಗೌರವ ಸ್ವೀಕರಿಸಿ ಮಾತನಾಡಿದ
ಹೆಚ್ ಎನ್ ಶ್ರೀಧರರ್ಮೂರ್ತಿ ಅವರು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಸವಲತ್ತು ಕೊಡಿಸುವುದೇ ನನ್ನ ಹೋರಾಟ ಎಂದು ತಿಳಿಸಿದರು.
ಸರ್ಕಾರದ ಸೌಲಭ್ಯಗಳು ಅರ್ಹ ಕಾರ್ಮಿಕರಿಗೆ ಸುಲಭವಾಗಿ ತಲುಪುವಂತಾಗಬೇಕು. ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕನಿಗೂ ಗೌರವಯುತ ಜೀವನ ನಡೆಸಲು ಅಗತ್ಯವಾದ ನೆರವು ದೊರೆಯಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.
ಅಡುಗೆ ಕ್ಷೇತ್ರದಲ್ಲಿ ಕಾರ್ಮಿಕರ ಬದುಕು ಹಸನಾಗಿಸಲು ಸರ್ಕಾರ ವಿಶೇಷ ಗಮನ ಹರಿಸಬೇಕು. ಕಾರ್ಮಿಕರಿಗೆ ಆರೋಗ್ಯ ವಿಮೆ, ಅಪಘಾತ ಪರಿಹಾರ, ಪಿಂಚಣಿ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ನೆರವು, ಮನೆ ನಿರ್ಮಾಣಕ್ಕೆ ಸಹಾಯಧನ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಮಿತಿ ರಚಿಸಲಾಗುತ್ತಿದ್ದು ಹೆಚ್ಚಿನ ಮಾಹಿತಿಗಾಗಿ 9845191017 ಸಂಪರ್ಕಿಸಬಹುದು ಎಂದು ಹೆಚ್ ಎನ್ ಶ್ರೀಧರರ್ಮೂರ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಎಸ್ ಎಸ್ ಮೂರ್ತಿ, ನಾಗೇಂದ್ರ, ದುರ್ಗಾ ಪ್ರಸಾದ್, ಅಮಿತ್, ರಂಗನಾಥ್, ಜಯಸಿಂಹ, ಪ್ರಶಾಂತ್, ಶ್ರೀಕಾಂತ್ ಕಶ್ಯಪ್, ವಿನಯ್ ಕಣಗಾಲ್, ಮತ್ತಿತರರು ಹಾಜರಿದ್ದರು.
