(ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು)
ಬೀದರ್: ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಶ್ರೀನಿವಾಸ ಎಸ್ ಅಂಬಳೆ ರಚಿಸಿರುವ ಹದಿನಾಡು ನಾಯಕರು ಮತ್ತು ಯಳಂದೂರು ಪ್ರಾಂತ್ಯದ ಶಾಸನಗಳು ಒಂದು ಅವಲೋಕನ ಕೃತಿ ಬಿಡುಗಡೆ ಮಾಡಲಾಯಿತು.
ಬೀದರ್ ಜಿಲ್ಲೆ ಭಾಲ್ಕಿಯ ಚೆನ್ನಬಸವೇಶ್ವರ ಹಿರೇಮಠ ಸಂಸ್ಥಾನದ ಅನುಭವ ಮಂಟಪ ವೇದಿಕೆಯಲ್ಲಿ ನಡೆಯುತ್ತಿರುವ ಕರ್ನಾಟಕ ಇತಿಹಾಸ ಅಕಾಡೆಮಿ ವಾರ್ಷಿಕ ಸಮ್ಮೇಳನದಲ್ಲಿ ಮೈಸೂರು ವಿಭಾಗದಿಂದ ಸಾಹಿತಿ, ಉಪನ್ಯಾಸಕ ರಾದ ಶ್ರೀನಿವಾಸ ಎಸ್ ಅಂಬಳೆ ರಚಿಸಿರುವ ಹದಿನಾಡು ನಾಯಕರು ಮತ್ತು ಯಳಂದೂರು ಪ್ರಾಂತ್ಯದ ಶಾಸನಗಳು ಒಂದು ಅವಲೋಕನ ಕೃತಿಯನ್ನು ಹಿರೇಮಠ ಸಂಸ್ಥಾನದ ನಾಡೋಜ ಚೆನ್ನಬಸವ ಪಟ್ಟದ ದೇವರು, ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಿ ವಿ ಪರಮಶಿವ ಮೂರ್ತಿ ಅವರು ಲೋಕಾರ್ಪಣೆ ಮಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ.ರವೀಂದ್ರನಾಥ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ಅಕಾಡೆಮಿ ಅಧ್ಯಕ್ಷರಾದ ಡಾ. ದೇವರಕೊಂಡರೆಡ್ಡಿ, ಸಂಶೋಧಕರಾದ ಲಕ್ಷ್ಮಣ ತೆಲಗಾವಿ ಸೇರಿದಂತೆ ಇತಿಹಾಸ ಸಂಶೋಧಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
