ಚಾಮರಾಜನಗರ: ಕೂಲಿ ಹಣಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಕೊಳ್ಳೇಗಾಲ ಅಪರ ಜಿಲ್ಲಾ & ಸತ್ರ ನ್ಯಾಯಾಲಯದ ನ್ಯಾಯಾಧೀಶರು
50ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.
ಮೈಸೂರು ಶ್ರೀರಾಂಪುರ, 2ನೇ ಹಂತ,ದೇವಯ್ಯಹುಂಡಿ ಗ್ರಾಮದ
ಮಣಿ@ ಮಂಜುನಾಥ (36) ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ಪುನೀತ್
ಕೊಲೆಯಾದ ದುರ್ದೈವಿ.
ಕೊಳ್ಳೇಗಾಲದ ಚೆನ್ನಮ್ಮ ಲಾಡ್ಜ್ ನಲ್ಲಿ ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ಪುನೀತ್ ಎಂಬುವರು ರೂಮ್ ಬಾಡಿಗೆ ಪಡೆದು ವಾಸಿಸುತ್ತಿದ್ದರು.
ಈತ ಕೊಳ್ಳೇಗಾಲದ ಅಕ್ಕಪಕ್ಕ ಊರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ರಾತ್ರಿ ವೇಳೆ ರೂಂಗೆ ಬರುತ್ತಿದ್ದರು.
4/3/25ರಂದು ಬೆಳಿಗ್ಗೆ 10-15 ಗಂಟೆಗೆ ವಾಪಸ್ ಕೊಳ್ಳೇಗಾಲ ಲಾಡ್ಜ್ ಗೆ ಬಂದು ತಂಗಿದ್ದರು.
ಅದೇ ದಿನ ಮದ್ಯಾಹ್ನ ಸುಮಾರು 2-30 ರಲ್ಲಿ ಲಾಡ್ಜ್ ನಲ್ಲಿದ್ದಾಗ ಪುನೀತ್ ಹೊಟ್ಟೆಗೆ ಯಾರೊ ಚಾಕುವಿನಿಂದ ಚುಚ್ಚಿದ್ದರು.
ತಕ್ಷಣ ಪುನೀತ ಅವರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಲಾಡ್ಜ್ನ ಹುಡುಗರ ಸಹಾಯದಿಂದ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದರು.
ಕೆಲಸ ಮಾಡಿದ ಕೂಲಿ ಹಣದ ವಿಚಾರವಾಗಿ ಮಣಿ@ ಮಂಜುನಾಥ ಎಂಬುವನು ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದನೆಂದು ಯಾರೊ ಮಾಹಿತಿ ನೀಡಿದ್ದರು.
ಪುನೀತರವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಸ್ಪತ್ರೆಗೆ ಕಳುಹಿಸಲಾಗಿದ್ದು, :5/3/25ರಂದು ಮದ್ಯರಾತ್ರಿ 1-53 ಗಂಟೆ ಸಮಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.
ಚೆನ್ನಮ್ಮ ಲಾಡ್ಜ್ನ ಮ್ಯಾನೇಜರ್ ಪುಟ್ಟರಾಜು ನೀಡಿದ ದೂರಿನ ಮೇರೆಗೆ ಕೊಳ್ಳೇಗಾಲ ಪಟ್ಟಣದ ಪೋಲಿಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.ವಿಚಾರಣೆ ವೇಳೆ ಮಂಜುನಾಥ ಕೂಲಿ ಹಣಕ್ಕಾಗಿ ಪುನೀತ್ ನನ್ನು ಕೊಲ್ಲಲು ಚಾಕುವಿನಿಂದ ಇರಿದಿದ್ದ ಎಂಬುದು ಗೊತ್ತಾಗಿದೆ.
ತನಿಖೆ ಪೂರ್ಣಗೊಳಿಸಿದ ಕೊಳ್ಳೇಗಾಲ ವೃತ್ತ ನಿರೀಕ್ಷಕ ಎಂ.ಶಿವಮಾದಯ್ಯ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಅದರಂತೆ ನ್ಯಾಯಾಲಯವು ವಿಚಾರಣೆ ನಡೆಸಿ ಈ ಪ್ರಕರಣದಲ್ಲಿ ಆರೋಪಿ ಮಂಜುನಾಥನಿಗೆ 50ಸಾವಿರ ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಅಪರ ಜಿಲ್ಲಾ & ಸತ್ರ ನ್ಯಾಯಾಲಯ, ಕೊಳ್ಳೇಗಾಲದ ನ್ಯಾಯಾಧೀಶರಾದ .ಟಿ.ಸಿ ಶ್ರೀಕಾಂತ ಅವರು ತೀರ್ಪು ನೀಡಿ, ಶಿಕ್ಷೆ ವಿಧಿಸಿದ್ದಾರೆ
ಅಪರ ಜಿಲ್ಲಾ & ಸತ್ರ ನ್ಯಾಯಾಲಯ, ಕೊಳ್ಳೇಗಾಲದ ಸರ್ಕಾರಿ ಅಭಿಯೋಜಕರಾದ ಎಸ್. ನಾಜೀಮಾ ಬೇಗಂ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು.
