ಮೈಸೂರು: ಮೈಸೂರಿನ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ಆಶ್ರಮಕ್ಕೆ ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೈಟ್ ನಿರ್ದೇಶಕರಾದ ಲಯನ್ ಅನಿಲ್ ಅವರು ದಿನಸಿ ಪದಾರ್ಥಗಳನ್ನು ನೀಡುವ ಮೂಲಕ ಆಶ್ರಮದ ತಾಯಂದಿರ ಸೇವೆ ಸಲ್ಲಿಸಿದ್ದಾರೆ.
ಈ ಮೂಲಕ ಆಶ್ರಮದ ತಾಯಂದಿರಿಗೆ ನೆರವಾಗಿರುವ ಲಯನ್ ಅನಿಲ್ ಅವರಿಗೆ ಸಂಸ್ಥೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಈ ವೇಳೆ ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೈಟ್ನ ಅಧ್ಯಕ್ಷರಾದ ಮೇಟಿ ಹನುಮಂತಪ್ಪ ,ಕಾರ್ಯದರ್ಶಿಗಳಾದ ಲಯನ್ ಸುರೇಶ್,ಮಾಜಿ ಅಧ್ಯಕ್ಷರಾದ ಲಯನ್ ಚಂದ್ರಶೇಖರ್,ಲಯನ್ ರಕ್ತದಾನಿ ಮಂಜು ಹಾಗೂ ಆಶ್ರಮದ ತಾಯಂದಿರು ಧನ್ಯವಾದ ಸಲ್ಲಿಸಿದರು.
ಸಮಾಜದಲ್ಲಿ ಇಂತಹ ಮಾನವೀಯ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿ. ನಿರ್ಗತಿಕ ತಾಯಂದಿರಿಗೆ ಪ್ರೀತಿ, ಕಾಳಜಿ ಹಾಗೂ ಆಸರೆಯಾಗುವ ಸೇವೆ ನಿಜಕ್ಕೂ ಶ್ಲಾಘನೀಯ,ತಾಯಂದಿರ ಸೇವೆ, ನಮ್ಮೆಲ್ಲರ ಹೊಣೆ ಎಂದು ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ರಾಜ್ಯ ಸಹಕಾರ್ಯದರ್ಶಿ ಲಯನ್ ರಕ್ತದಾನಿ ಮಂಜು ತಿಳಿಸಿದ್ದಾರೆ.
