ಮೈಸೂರು: ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಹುಣಸೂರು ತಾಲ್ಲೂಕು ಕಟ್ಟೆಮಳಲವಾಡಿ ಗ್ರಾಮದ ಬಣಜಿಗ ಶೆಟ್ಟರು ಸಮುದಾಯದ ಮಾಜಿ ಅಧ್ಯಕ್ಷ ವಿಠಲ ಶೆಟ್ಟರನ್ನು ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ಭೇಟಿ ಮಾಡಿದರು.
ಮೈಸೂರಿನ ಕೆ.ಆರ್ ಆಸ್ಪತ್ರೆಯ ಕಾಂತರಾಜ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಠಲ ಶೆಟ್ಟರನ್ನು ನಿಂಗರಾಜ್ ಮಲ್ಲಾಡಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ನಿಂಗರಾಜ್ ಮಲ್ಲಾಡಿ ಅವರು,ವಿಠಲ ಶೆಟ್ಟರು ಕಟ್ಟೆಮಳಲವಾಡಿ ಗ್ರಾಮ ಪಂಚಾಯ್ತಿಯಲ್ಲಿ ಈ ಹಿಂದೆ ಛೇರ್ಮನ್ ಆಗಿ ವಿಎಸ್ ಎಸ್ ಎನ್ ಸೊಸೈಟಿಯಲ್ಲಿ ಹಲವಾರು ಬಾರಿ ಅಧ್ಯಕ್ಷರಾಗಿ ಗ್ರಾಮದ ಎಲ್ಲಾ ಜಾತಿಯ ಬಡ ಜನರ ರೈತರ, ಕಷ್ಟ ಕಾರ್ಪಣ್ಯಗಳಿಗೆ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ಗ್ರಾಮದಲ್ಲಿ ಜಾತಿ ಬೇದವಿಲ್ಲದೆ ಎಲ್ಲಾ ಜಾತಿಯ ನೊಂದ ಜನರ ಸಮಸ್ಯೆಗಳನ್ನು ಪರಿಹರಿಸುವ ಮನಸ್ಸು ಉಳ್ಳವರಾಗಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆಗಳು ಎದುರಾದಾಗ ಶಾಂತಿ ಸಾಮರಸ್ಯದಿಂದ ಪರಿಹರಿಸುವ ಮನೋಭಾವವುಳ್ಳವರಾಗಿದ್ದಾರೆ ಎಂದು ಹೇಳಿದರು.
ಶಾಸಕರಾದ ಜಿ.ಟಿ. ದೇವೇಗೌಡರು ಮತ್ತು ಅವರ ಮಗ ಹುಣಸೂರು ಶಾಸಕರಾದ ಜಿ.ಡಿ ಹರೀಶ್ ಗೌಡ ಅವರ ಪರಮಾಪ್ತರಾಗಿದ್ದು, ಅವರ ಕುಟುಂಬದ ಜೊತೆ ಹಲವಾರು ವರ್ಷಗಳಿಂದ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ಗ್ರಾಮದ ಹಬ್ಬ, ಜಾತ್ರಾ ಮಹೋತ್ಸವಗಳಲ್ಲಿ ಮುಂದೆ ನಿಂತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಸಿಕೊಟ್ಟಿದ್ದಾರೆ.
ಪಂಚಾಯ್ತಿ ಛೇರ್ಮನ್ ಆಗಿ ಗ್ರಾಮದ ಅಭಿವೃದ್ಧಿಗೆ ತುಂಬಾ ಶ್ರಮ ವಹಿಸಿದ್ದಾರೆ. ಕಟ್ಟೆಮಳಲವಾಡಿ ಸುತ್ತಮುತ್ತಲಿನ ಗ್ರಾಮಗಳಿಗೆ ಚಿರಪರಿಚಿತರಾಗಿ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಇಂತವರು ಕಿಡ್ನಿ ಸಮಸ್ಯೆಯಿಂದ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಬೇಗ ಗುಣಮುಖರಾಗಲಿ ಎಂದು ನಾಗರಾಜ್ ಮಲ್ಲಾಡಿ ಪ್ರಾರ್ಥಿಸಿದು.
ಈ ಸಂದರ್ಭದಲ್ಲಿ ವಿಠಲ ಶೆಟ್ಟರ ತಮ್ಮ ನಾಗೇಂದ್ರ ಶೆಟ್ಟರು ಹಾಜರಿದ್ದರು.
