ಮೈಸೂರು: ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮಕ್ಕೆ
ಚಿತ್ರನಟ ಹಾಗೂ ಸಮಾಜ ಸೇವಕರಾದ ಚೇತನ್ ಅಹಿಂಸಾ ಅವರು ಭೇಟಿ ನೀಡಿದ್ದರು.
ಕಾರ್ಯನಿಮಿತ್ತ ಕಟ್ಟೆಮಳಲವಾಡಿ ಗ್ರಾಮಕ್ಕೆ ಆಗಮಿಸಿದ್ದ ಚೇತನ್ ಅಹಿಂಸಾ ಅವರು ಇಲ್ಲಿನ ಸಮೃದ್ಧಿ ಮಹಿಳಾ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಟೈಲರಿಂಗ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ರು.
ಈ ವೇಳೆ ಟೈಲರಿಂಗ್ ತರಬೇತಿ ಪಡೆಯುತ್ತಿರುವ ಮಹಿಳೆಯರೊಂದಿಗೆ ಆತ್ಮೀಯವಾಗಿ ಮಾತನಾಡಿ ತರಬೇತಿ ಕುರಿತು ತಿಳಿದುಕೊಂಡರು.
