ಮೈಸೂರು: ಮೈಸೂರು ನಗರ ಬಿಜೆಪಿ ಕಾರ್ಯಾಲಯದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ರಾಷ್ಟ್ರನಿಷ್ಠೆ, ಸರಳತೆ ಹಾಗೂ ಅಂತ್ಯೋದಯದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಕೆ ಗಿರೀಶ್, ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಅಧ್ಯಕ್ಷರಾದ ರಾಕೇಶ್ ಭಟ್, ಪ್ರಧಾನ ಕಾರ್ಯದರ್ಶಿ ಈರೇಗೌಡ, ಉಪಾಧ್ಯಕ್ಷ ಶಿವು ಪಟೇಲ್, ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಎಸ್ ತ್ಯಾಗರಾಜ್, ಐಟಿ ಸೆಲ್ ನಗರ ಸಂಚಾಲಕರಾದ ರಮೇಶ್, ರಾಜೇಂದ್ರ, ಮುಖಂಡರಾದ ಮಹೇಶ್, ಪ್ರಕಾಶ್, ಚೇತನ್ ಮತ್ತಿತರರು ಭಾಗವಹಿಸಿದ್ದರು.
