ಬನ್ನೂರು: ಕಸ್ತೂರಿ ರಂಗನ್ ವರದಿ ಜಾರಿಗೆ ತರುವುದನ್ನು ಕರ್ನಾಟಕ ರೈತ ಸಂಘ ಮೂಲ ಸಂಘಟನೆ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ತೀವ್ರವಾಗಿ ವಿರೋಧಿಸಿದ್ದಾರೆ.
ವಿರೋಧಕ್ಕೆ ಕಾರಣವನ್ನೂ ನಾರಾಯಣ್ ಒಂದು ವಿಡಿಯೋ ಮಾಡಿ ವಿವರ ನೀಡಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಹಸಿರು ನ್ಯಾಯಾಧಿಕರಣ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯನ್ನು ರೈತ ಸಂಘಟನೆಗಳು ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸುತ್ತವೆ ಎಂದು ತಿಳಿಸಿದರು.
ಈಗಾಗಲೇ ನೂರಾರು ಹಳ್ಳಿಗಳಲ್ಲಿ ರೈತರು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ.ಮನೆಗಳನ್ನ ನಿರ್ಮಿಸಿ,ಜಾನುವಾರು ಸಾಕುತ್ತಿದ್ದಾರೆ.ಈ ಎಲ್ಲಾ ಸ್ಥಳಗಳನ್ನ ಹೊರತುಪಡಿಸಿ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಬೇಕು.ಯಾವುದೇ ಸ್ಯಾಟಲೈಟ್ ಮೂಲಕ ಮಾಡಿರುವ ಅವೈಜ್ಞಾನಿಕ ವರದಿಯನ್ನು ಜಾರಿ ಮಾಡಬಾರದು ಮತ್ತು ಈಗ ಮಾಡಿರುವ ಕಸ್ತೂರಿ ರಂಗನ್ ವರದಿಯನ್ನು ಹಿಂಪಡೆಯಬೇಕು ಎಂದು ಬನ್ನೂರು ನಾರಾಯಣ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪಶ್ಚಿಮ ಘಟ್ಟದಲ್ಲಿ ಯಾರನ್ನೂ ಒಕ್ಕಲೆಬ್ಬಿಸಬಾರದು,ಪಶ್ಚಿಮಘಟ್ಟಗಳನ್ನ ರಕ್ಷಿಸಬೇಕು ಒಂದು ವೇಳೆ ಅಲ್ಲಿನವರನ್ನ ಒಕ್ಕಲೆಬ್ಬಿಸಿದರೆ ಕರ್ನಾಟಕ ರೈತ ಸಂಘ ಮೂಲ ಸಂಘಟನೆ ಪಶ್ಚಿಮ ಘಟ್ಟಗಳ ಜನರ ಪರವಾಗಿ ಹೋರಾಟ ಮಾಡುತ್ತದೆ.ಕೇಂದ್ರದ ನಿಲುವನ್ನು ಖಂಡಿಸುತ್ತದೆ ಎಂದು ಬನ್ನೂರು ನಾರಾಯಣ್ ಎಚ್ಚರಿಸಿದರು.
