ಮೈಸೂರು: ಎಲ್ಲಾ ದಾನಗಳಿಗಿಂತ ಅನ್ನದಾನ ಅತ್ಯಂತ ಶ್ರೇಷ್ಠವಾದುದು ಎಂದು ಬ್ರಾಹ್ಮಣ ಏಕಿಕೃತ ಪರಿಷತ್ ಕರ್ನಾಟಕ ರಾಜ್ಯದಕ್ಷರು ಹಾಗು ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರೂ ಆದ ಎನ್.ಎಂ ನವೀನ್ ಕುಮಾರ್ ಹೇಳಿದರು.
ಶ್ರೀ ಗುರುರಾಘವೇಂದ್ರ ಸ್ವಾಮಿಗಳ 355 ನೇ ಆರಾಧನೆ ಸಂದರ್ಭದಲ್ಲಿ ಎನ್.ಎಂ ನವೀನ್ ಕುಮಾರ್,ಕೃಷ್ಣರಾಜ ಕ್ಷೇತ್ರದ ಫೋರ್ಟ್ ಮೊಹಲ್ಲಾದ ಗುರುರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬರೀ ಕರ್ನಾಟಕ ದಲ್ಲಷ್ಟೆ ಅಲ್ಲ ಇಡಿ ಭಾರತಾದ್ಯಂತ ಹಾಗು ಹೊರದೇಶಗಳಲ್ಲಿ ಸಹ ರಾಯರ ಆರಾಧನೆ ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದು ಎಲ್ಲಾ ಕಡೆ ಅನ್ನ ದಾನದ ಕಾರ್ಯಕ್ರಮಗಳು ಯಾವುದೇ ಜಾತಿ ಮತ ಬೇದ ವಿಲ್ಲದೆ ನಡೆಯುತಿದೆ ಎಂದು ತಿಳಿಸಿದರು.
ಶ್ರೀಗುರು ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಹೂವಿನ ಅಲಂಕಾರ ಕೂಡ ನಡೆಯುತ್ತಿರುವುದು ಬಹಳ ವಿಶೇಷ ಎಂದು ಹೇಳಿದರು.
ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪ್ರತಿಯೊಬ್ಬ ಭಕ್ತರ ಮೇಲೆ ಇರಲಿ, ಸರ್ವರಿಗೂ ಒಳ್ಳೆಯದು ಆಗಲಿ ಎಂದು ಎನ್. ಎಂ ನವೀನ್ ಕುಮಾರ್ ಹಾರೈಸಿದರು.
